ನವದೆಹಲಿ: ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರು ಮಾತು ಆರಂಭಿಸುತ್ತಿದ್ದಾಗ ‘ಮೋದಿ-ಅದಾನಿ ಭಾಯಿ-ಭಾಯಿ’ ಎಂಬ ಘೋಷಣೆ ಕೂಗಿದರು.
ಆ ಸಂದರ್ಭ ಅದಾನಿ ವಿರುದ್ಧ ಹಿಂಡೆನ್ ಬರ್ಗ್ ಬಿಡುಗಡೆಗೊಳಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿರುವ ವಂಚನೆ ಮತ್ತು ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪಟ್ಟು ಹಿಡಿದ ವಿರೋಧ ಪಕ್ಷಗಳ ಸದಸ್ಯರು, ‘ವಿ ವಾಂಟ್ ಜೆಪಿಸಿ’ ಎಂದು ಘೋಷಣೆ ಕೂಗಿದರು.
ಪ್ರತಿಪಕ್ಷಗಳ ಸದಸ್ಯರ ಘೋಷಣೆಗೆ ನರೇಂದ್ರ ಮೋದಿ ಅವರು “ನೀವು ಕೆಸರನ್ನು ಎರಚಿದಷ್ಟೂ ಕಮಲ ಅರಳುತ್ತದೆ” ಎಂದು ಪ್ರತಿಕ್ರಿಯಿಸಿದರು.