ಫಾಝಿಲ್ ಹತ್ಯೆಯನ್ನು ಸಮರ್ಥಿಸಿ ಇನ್ನಷ್ಟು ಕೊಲೆಗೆ ಪ್ರೇರಣೆ ನೀಡಿದರೂ ಶರಣ್ ಪಂಪ್’ವೆಲ್ ಬಂಧನ ಯಾಕಿಲ್ಲ? ಎಸ್’ಡಿಪಿಐ ಆಕ್ರೋಶ

Prasthutha|

▪ಸುಪ್ರೀಂ ಕೋರ್ಟ್ ಆದೇಶದಂತೆ ಶರಣ್ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ

- Advertisement -

ಮಂಗಳೂರು: ಫಾಝಿಲ್ ಹತ್ಯೆಯ ಸೂತ್ರಧಾರ ಹಾಗೂ ಪ್ರಚೋದನಕಾರಿ ಭಾಷಣ ಮೂಲಕ ಕುಖ್ಯಾತಿ ಪಡೆದು ಜಿಲ್ಲೆಯಲ್ಲಿ ಹಲವಾರು ಗಲಭೆ, ಗುಂಪು ಹಲ್ಲೆ, ಕೊಲೆಗಳಿಗೆ ಕಾರಣಕರ್ತನಾಗಿರುವ ದ.ಕ ಜಿಲ್ಲೆ ಕಂಡ ಕ್ರಿಮಿನಲ್ ಹಿನ್ನೆಲೆಯ ಸಂಘಪರಿವಾರದ ನಾಯಕ ಶರಣ್ ಪಂಪ್’ವೆಲ್ ಎಂಬ ಕೋಮು ಕ್ರಿಮಿಯು ತುಮಕೂರಿನಲ್ಲಿ ಫಾಝಿಲ್ ಕೊಲೆಯನ್ನು ಸಮರ್ಥಿಸಿದಲ್ಲದೇ ಇನ್ನಷ್ಟು ವಂಶ ಹತ್ಯೆಗೆ ಪ್ರಚೋದನೆ ನಡೆಸುವ ರೀತಿಯಲ್ಲಿ ಭಾಷಣ ಮಾಡಿದ ಈತನ ವಿರುದ್ಧ ಕೇಸ್ ದಾಖಲಿಸಿ ಬಂಧನ ಯಾಕೆ ನಡೆಸಿಲ್ಲ ಎಂದು ಎಸ್’ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಅದಕ್ಕೆ ಸಂಬಂಧವೇ ಇಲ್ಲದ ಸುರತ್ಕಲ್ ಫಾಝಿಲ್ ಹತ್ಯೆ ಮಾಡಲಾಯಿತು. ಫಾಝಿಲ್ ಕುಟುಂಬವೂ ಈ ಹತ್ಯೆಯ ಹಿಂದೆ ಇದೇ ಶರಣ್ ಪಂಪ್ ವೆಲ್’ನ ಕೈವಾಡ ಇದೆಯೆಂದು ಬಹಿರಂಗವಾಗಿ ಹೇಳಿದ್ದರೂ ಪೊಲೀಸ್ ಇಲಾಖೆ ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಈ ಕೋಮು ಕ್ರಿಮಿಯನ್ನು ಕೇಸ್’ನಿಂದ ಬಚಾವ್’ಗೊಳಿಸಿ ಸ್ವಚ್ಛಂದವಾಗಿ ಬಿಟ್ಟಿರುವುದೇ ಈತ ಸಂಘ ಪರಿವಾರದ ಸಂಸ್ಕೃತಿಯನ್ನು ಮುಂದುವರೆಸಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶರಣ್ ಪಂಪ್’ವೆಲ್’ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಲ್ಲಿ ಮಂಗಳೂರಿನಲ್ಲಿ ನಡೆದ ಹಲವಾರು ಅಮಾಯಕರ ಹಿಂದೂ ಮುಸ್ಲಿಮ್ ಯುವಕರ ಕೊಲೆಗಳ ಹಿಂದಿನ ಸತ್ಯ ಬಯಲಾಗಬಹುದು ಎಂದು ಅವರು ಹೇಳಿದ್ದಾರೆ.
ಭಾರತ ಮಾತೆ, ದೇಶ ಭಕ್ತರು, ಬೇಟೀ ಬಚಾವೋ ,ಲವ್ ಜಿಹಾದ್ ಎಂದು ಸದಾ ಬೊಗಳೆ ಬಿಡುವ ಸಂಘಪರಿವಾರದ ಸಂಸ್ಕೃತಿಯೇ ಇದು ಎಂದು ಪ್ರಶ್ನಿಸಿದ ಅವರು, ಇಂತಹ ಭಾಷಣ ಸಂಘಪರಿವಾರದ ನಾಯಕರಿಂದ ಇದೇ ಮೊದಲಲ್ಲ ಹಾಗೂ ಇದುವೇ ಅಂತ್ಯವಲ್ಲ ಎಂಬುದು ಕೂಡ ವಾಸ್ತವವಾಗಿದೆ. ಯಾಕೆಂದರೆ ಇಂತಹ ಬೀದಿ ಗೂಂಡಾಗಳನ್ನು ಅಶಾಂತಿ ಹಬ್ಬಿಸಲು ಬೀದಿಗೆ ಬಿಟ್ಟು ನಂತರ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಸಣ್ಣಪುಟ್ಟ ಕೇಸ್ ದಾಖಲಿಸಿದರೂ ನಂತರ ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿ ಸರ್ಕಾರ ಪ್ರಕರಣವನ್ನು ವಾಪಸ್ ಪಡೆದು ಇವರನ್ನು ಪುನಃ ಬೀದಿಗೆ ಬಿಡುವುದು ಇಲ್ಲಿಯ ತನಕ ನಡೆದು ಬಂದ ಬಿಜೆಪಿ ಸರ್ಕಾರದ ಹೀನ ಸಂಸ್ಕೃತಿಯಾಗಿದೆ. ಇಂತಹವರ ಉಪಟಳ ಹೆಚ್ಚದ ಸಂದರ್ಭದಲ್ಲಿ ಯಾರದ್ದೋ ಕೈಯಲ್ಲಿ ಇಂತವರ ಮೇಲೆ ಪ್ರತೀಕಾರದ ದಾಳಿಯಾದಾಗ ಅದರ ಹೆಸರಿನಲ್ಲಿ ಪುನಃ ಕೋಮು ಗಲಭೆ ನಡೆಸುವುದು ಬಿಜೆಪಿಯು ಇಲ್ಲಿಯ ತನಕ ನಡೆಸಿಕೊಂಡು ಬಂದ ನಿಯಮವಾಗಿದೆ. ಒಂದು ವೇಳೆ ಪೋಲಿಸ್ ಇಲಾಖೆ ಇಂತಹವರನ್ನು ಹದ್ದು ಬಸ್ತಿನಲ್ಲಿಟ್ಟು ಶಾಂತಿ ಕಾಪಾಡದಿದ್ದರೆ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಆದ್ದರಿಂದ ಶರಣ್ ವಿರುದ್ಧ ಪೋಲಿಸ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶದಂತೆ ಸುಮೊಟೊ ಕೇಸ್ ದಾಖಲಿಸಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಈತನನ್ನು ಸೇರಿಸಿ ಈತನ ಮಂಪರು ಪರೀಕ್ಷೆ ನಡೆಸಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.



Join Whatsapp