ಭೋಪಾಲ್: ಬಿಜೆಪಿಯ ಮಾಜಿ ಕೌನ್ಸಿಲರ್ ತನ್ನ ಪತ್ನಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.
ಸಂಜೀವ್ ಮಿಶ್ರಾ (45), ಪತ್ನಿ ನೀಲಂ ಮಿಶ್ರಾ ಹಾಗೂ ಇಬ್ಬರು ಪುತ್ರರಾದ ಅನ್ಮೋಲ್ ಮತ್ತು ಸಾರ್ಥಕ್ ಮಿಶ್ರಾ ಮೃತಪಟ್ಟವರು.
ಸಂಜೀವ್ ಮಿಶ್ರಾ ಮಾಜಿ ಬಿಜೆಪಿ ಕಾರ್ಪೊರೇಟರ್ ಆಗಿದ್ದು, ಬ್ರಾಸ್ ಮಿಲ್ ಬಳಿ ‘ಜನತಾ ಭೋಜನಾಲಯ’ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು.
ತನ್ನ ಮಗ ‘ಮಸ್ಕ್ಯುಲರ್ ಡಿಸ್ಟ್ರೋಫಿ’ ಎಂಬ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಐದು ವರ್ಷಗಳಿಂದ ಚಿಕಿತ್ಸೆ ನೀಡುತ್ತಿದ್ದರೂ ಗುಣವಾಗಿರಲಿಲ್ಲ. ಇದರಿಂದ ಮನನೊಂದ ಸಂಜೀವ್ ಮುಂದಿನ ದಿನಗಳಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ ಎಂದು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ.