ಕಾಂಗ್ರೆಸ್ ಪಕ್ಷಕ್ಕೆ ಅನಿಲ್ ಆ್ಯಂಟನಿ ರಾಜೀನಾಮೆ: ಯೂತ್ ಕಾಂಗ್ರೆಸ್ ಸ್ವಾಗತ

Prasthutha|

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆ್ಯಂಟನಿ ಅವರ ಪುತ್ರ ಮತ್ತು ಕಾಂಗ್ರೆಸ್’ನ ಡಿಜಿಟಲ್ ಮಾಧ್ಯಮ ವಿಭಾಗದ ಸಂಚಾಲಕ ಅನಿಲ್ ಕೆ ಆ್ಯಂಟನಿ ಅವರು ಕೆಪಿಸಿಸಿ ಡಿಜಿಟಲ್ ಮಾಧ್ಯಮ ಸಂಚಾಲಕ ಮತ್ತು ಎಐಸಿಸಿ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ಕೋಶದ ರಾಷ್ಟ್ರೀಯ ಸಂಯೋಜಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

- Advertisement -


ಟ್ವಿಟರ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಹಂಚಿಕೊಂಡ ಅನಿಲ್, “ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವವರು ಟ್ವೀಟ್ ನಲ್ಲಿ ಅಸಹಿಷ್ಣುತೆಯನ್ನು ತೋರುತ್ತಿದ್ದಾರೆ. ಟ್ವೀಟ್ ಅನ್ನು ಹಿಂಪಡೆದುಕೊಳ್ಳಬೇಕೆಂಬ ಅವರ ಮನವಿಯನ್ನು ನಾನು ತಿರಸ್ಕರಿಸಿದ್ದೇನೆ ಎಂದು ಹೇಳಿದರು.


ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಬಿಬಿಸಿ ತಯಾರಿಸಿದ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರದ ವಿವಾದದ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿ ಅನಿಲ್ ಕೆ ಆಂಟನಿ ನಿನ್ನೆ ಟ್ವೀಟ್ ಮಾಡಿದ್ದರು.

- Advertisement -


ಅನಿಲ್ ಕೆ ಆ್ಯಂಟನಿ ಅವರ ರಾಜೀನಾಮೆಯನ್ನು ಯುವ ಕಾಂಗ್ರೆಸ್ ಸ್ವಾಗತಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ವಿಧಾನಸಭೆಯ ಮಾಜಿ ಸದಸ್ಯ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಶಬರಿನಾಥನ್, ಜವಾಬ್ದಾರಿಯುತ ಹುದ್ದೆಯಲ್ಲಿರುವಾಗ ಅನಿಲ್ ಅವರು ಮಾಡಿದ ಟ್ವೀಟ್ ಸೂಕ್ತವಲ್ಲ.ಅನಿಲ್ ಅವರ ಅಭಿಪ್ರಾಯ ದುರದೃಷ್ಟಕರ. ಅವರು ಯಾರ ಮಗ ಎಂಬುವುದು ಮುಖ್ಯವಲ್ಲ. ಕೆಪಿಸಿಸಿಯ ಡಿಜಿಟಲ್ ಮಾಧ್ಯಮ ವಿಭಾಗವು ಕಳೆದ ಒಂದೂವರೆ ವರ್ಷದಿಂದ ನಿಷ್ಕ್ರಿಯವಾಗಿದೆ ಎಂದು ಹೇಳಿದರು.



Join Whatsapp