ಜಾಕೆಟ್​’ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ: ಜಾಕೆಟ್ ಅಲ್ಲ ರೇನ್​’ಕೋಟ್​ ಎಂದ ಕಾಂಗ್ರೆಸ್

Prasthutha|

- Advertisement -

ಕಥುವ: ಕಾಶ್ಮೀರದ ಕಥುವಾದಿಂದ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಳಿಗಾಲದ ಜಾಕೆಟ್ ಧರಿಸಿ ಹೆಜ್ಜೆ ಹಾಕಿದ್ದಾರೆ.

ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದಾಗ ರಾಹುಲ್ ಗಾಂಧಿ ಅವರು ಇಡೀ ಪಾದಯಾತ್ರೆಯಲ್ಲಿ ಕೇವಲ ಟೀ ಶರ್ಟ್ ಧರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.

- Advertisement -

ಇನ್ನು ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, ರಾಹುಲ್ ಗಾಂಧಿ ಧರಿಸಿದ್ದು, ಜಾಕೆಟ್ ಅಲ್ಲ ರೇನ್‌ಕೋಟ್ ಎಂದು ಹೇಳಿದೆ.

ಮಳೆ ಹೋದ ನಂತರ ರೇನ್‌ಕೋಟ್ ಕೂಡ ಅವರು ತೆಗೆದಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.



Join Whatsapp