ಶಂಕರ್ ಮಿಶ್ರಾ ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾಗೆ ರೂ. 30 ಲಕ್ಷ ದಂಡ, ಪೈಲಟ್ ಪರವಾನಗಿ ಅಮಾನತು

Prasthutha|

ನವದೆಹಲಿ: ಶಂಕರ್ ಮಿಶ್ರಾ ಎಂಬಾತ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದಲ್ಲಿ ಏರ್ ಇಂಡಿಯಾಗೆ ರೂ. 30 ಲಕ್ಷ ದಂಡ ಹಾಕುತ್ತಿರುವುದಾಗಿಯೂ, ಸದರಿ ಹಾರಾಟ ನಡೆಸಿದ್ದ ಪೈಲಟ್’ನ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡುವುದಾಗಿಯೂ ನಾಗರಿಕ ವಿಮಾನಯಾನ ನಿಯಂತ್ರಣದ ಮಹಾನಿರ್ದೇಶನಾಲಯ ಪ್ರಕಟಿಸಿದೆ.

- Advertisement -

ಹಿರಿಯ ಮಹಿಳೆ ಮೇಲೆ ಮಿಶ್ರಾ ಉಚ್ಚೆ ಹೊಯ್ದ ಪ್ರಕರಣವು ನವೆಂಬರ್ 26ರಂದು ವಿಮಾನದಲ್ಲಿ ನಡೆದಿತ್ತು.

ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾದುದಕ್ಕೆ ವಿಮಾನ ಸೇವಾ ನಿರ್ದೇಶಕರಿಗೆ ರೂ. 3 ಲಕ್ಷ ದಂಡವನ್ನು ಡಿಜಿಸಿಎ- ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಹೇರಿದ್ದಾರೆ.

- Advertisement -

ಟಾಟಾ ಮಾಲಕತ್ವದ ಏರ್ ಇಂಡಿಯಾ ಹಾರಾಟ ಸೇವೆ ನಿರ್ದೇಶಕರಿಗೆ ಡಿಜಿಸಿಎ ನೋಟಿಸ್ ನೀಡಿತ್ತು. ಆ ಯಾನದಲ್ಲಿದ್ದ ಎಲ್ಲ ಸಿಬ್ಬಂದಿ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಬಾರದು? ಎಂದು ಕೇಳಿ ಎರಡು ವಾರದೊಳಗೆ ಉತ್ತರಿಸುವಂತೆ ನೋಟೀಸು ನೀಡಲಾಗಿತ್ತು.

ಶಂಕರ್ ಮಿಶ್ರಾ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾನೆ. ಆ ಮಹಿಳೆಯೇ ಮೂತ್ರ ಮಾಡಿದ್ದಾಳೆ. ಮಾನಹಾನಿಕರ ಎಂದರೆ, ಮಿಶ್ರಾ ಹೇಳುತ್ತಿರುವುದು ಹಸೀ ಸುಳ್ಳು ಎಂದು ಮಹಿಳೆ ಹೇಳುತ್ತಿದ್ಧಾರೆ.  

ಟಾಟಾ ಗುಂಪಿನ ಚೇರ್ಮನ್ ಎನ್. ಚಂದ್ರಶೇಖರನ್ ಈ ಘಟನೆ ಬಗ್ಗೆ  ಶೀಘ್ರ ಸ್ಪಂದಿಸುವುದಾಗಿ ಜನವರಿ ಮೊದಲ ವಾರ ಹೇಳಿದ್ದರು.

ನವೆಂಬರ್ 27ರಂದು ನ್ಯೂಯಾರ್ಕಿನಿಂದ ಬಂದ ವಿಮಾನ ದಿಲ್ಲಿಯಲ್ಲಿ ಇಳಿಯುತ್ತಲೇ ಶಂಕರ್ ಮಿಶ್ರಾ ಇಳಿದು ಹೋಗಿದ್ದಾನೆ. ಸಂತ್ರಸ್ತ ಮಹಿಳೆ ಈ ಬಗ್ಗೆ ನಾಲ್ಕು ದಿನಗಳ ಬಳಿಕ ಏರ್ ಇಂಡಿಯಾ ಗುಂಪಿನ ಚೇರ್ಮನ್’ಗೆ ಪತ್ರ ಬರೆದಿದ್ದಳು. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಯುವುದಾಗಿ ಹೇಳಲಾಗಿತ್ತು. ಆದರೆ ಆಗಿಲ್ಲ ಎಂದು ಜನವರಿ 4ರಂದು ಏರ್ ಇಂಡಿಯಾ ಮಿಶ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಿತ್ತು. ಮಿಶ್ರಾನನ್ನು ಮುಂಬೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. 



Join Whatsapp