ನೆಹರೂ ರೈತರು, ಬಡವರ ಪರವಾಗಿ ಅಪಾರ ಕಾಳಜಿ ಹೊಂದಿದ್ದರು: ವರುಣ್ ಗಾಂಧಿ

Prasthutha|

- Advertisement -

ಲಖ​ನೌ: ನೆಹರೂ ರೈತರು, ಬಡವರ ಪರವಾಗಿ ಅಪಾರ ಕಾಳಜಿ ಹೊಂದಿದ್ದರು ಎಂದು ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ವರುಣ್ ಗಾಂಧಿ ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ವದಂತಿಗಳ ಮಧ್ಯೆಯೇ ತಮ್ಮ ಮುತ್ತಾತ ಜವಾಹರಲಾಲ್ ನೆಹರೂ ಅವರನ್ನು ವರುಣ್ ಗಾಂಧಿ ಹೊಗಳಿ ಮಾತನಾಡಿದ್ದಾರೆ.

- Advertisement -

ಪಿಲಿಭೀತ್‌ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವರುಣ್ ಗಾಂಧಿ, ರೈತರು, ಬಡವರ ಪರವಾಗಿ ನೆಹರೂ ಅವರು ಅಪಾರ ಕಾಳಜಿ ಹೊಂದಿದ್ದರು. ಐಷಾರಾಮಿ ಜೀವನಕ್ಕಾಗಿ ಹಾತೊರೆಯದೆ ಬಡವರ ಉದ್ದಾರಕ್ಕಾಗಿ ಅವರು ಪಣತೊಟ್ಟಿದ್ದರು ಎಂದರು.

ಬಡವರ ಮೇಲಿನ ಕಾಳಜಿಯಿಂದಾಗಿ ಅವರು ಸರ್ಕಾರಿ ವೇತನ, ಬಂಗಲೆ, ಭತ್ಯೆಗಳನ್ನೆಲ್ಲಾ ತ್ಯಾಗ ಮಾಡಿದ್ದರು ಎಂದರು.



Join Whatsapp