ನ್ಯೂಯಾರ್ಕ್: ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ಗೆ ವಾರದೊಳಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲು ಅಮೆರಿಕ ಮುಂದಾಗಿದೆ. ಸುಮಾರು 2.5 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಯುದ್ಧ ಸಲಕರಣೆ ಪೂರೈಕೆ ಭಾಗವಾಗಿ ಉಕ್ರೇನ್‌ಗೆ 90 ಶಸ್ತ್ರಸಜ್ಜಿತ ಯುದ್ಧ ವಾಹನಗಳನ್ನು ಕಳುಹಿಸಲು ಅಮೆರಿಕ ನಿರ್ಧರಿಸಿದೆ.
ಉಕ್ರೇನ್ ಗೆ 14 ಚಾಲೆಂಜರ್ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸುವುದಾಗಿ ಬುಧವಾರ ಬ್ರಿಟನ್ ಘೋಷಿಸಿತ್ತು. ಇದರ ಬೆನ್ನಲ್ಲೇ ಅಮೆರಿಕ ಕೂಡ ಉಕ್ರೇನ್ ಸಹಾಯಕ್ಕೆ ನಿಂತಿದ್ದು, ಒಂದು ವಾರದಲ್ಲಿ ಈ ನೆರವು ತಲುಪುವ ಸಾಧ್ಯತೆ ಇದೆ. ಇದರೊಂದಿಗೆ ಉಕ್ರೇನ್ ಬಲ ಹೆಚ್ಚಾಗಿದೆ. ಅಮೆರಿಕ, ಫ್ರಾನ್ಸ್ ಮತ್ತು ಜರ್ಮನಿ ಯುದ್ಧ ವಾಹನಗಳನ್ನು ಕಳುಹಿಸಲು ಒಪ್ಪಿಕೊಂಡಿವೆ.