ನವದೆಹಲಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ ಶಂಕರ್ ಮಿಶ್ರಾಗೆ ಏರ್ ಇಂಡಿಯಾ ನಾಲ್ಕು ತಿಂಗಳ ವಿಮಾನಯಾನವನ್ನು ನಿಷೇಧಿಸಿದೆ
ಕಳೆದ ನ. 26 ರಂದು ನ್ಯೂಯಾರ್ಕ್’ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾಗೆ ಏರ್’ಲೈನ್ಸ್ ನಾಲ್ಕು ತಿಂಗಳ ಕಾಲ ನಿಷೇಧ ಹೇರಿದೆ. ಶಂಕರ್ ಮಿಶ್ರಾ ಅವರು ವಿಮಾನದಲ್ಲಿ 70 ವರ್ಷದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈತನ ಕ್ರೂರ ಕೃತ್ಯದ ಆರು ವಾರಗಳ ನಂತರ ಆತನನ್ನು ಕಳೆದ ವಾರ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.
ತ್ವರಿತ ಕ್ರಮ ಕೈಗೊಳ್ಳದ ಕಾರಣ ಏರ್ ಇಂಡಿಯಾ ಭಾರೀ ಟೀಕೆಗೆ ಗುರಿಯಾಗಿತ್ತು. ದೆಹಲಿಯಲ್ಲಿ ವಿಮಾನ ಇಳಿದಾಗ ಮಿಶ್ರಾ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಾತ್ರವಲ್ಲ ಆತನನ್ನು ಬಿಟ್ಟು ಕಳುಹಿಸಿತ್ತು. ಏರ್’ಲೈನ್ಸ್ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿದೆ, ಎರಡೂ ಕಡೆಯವರು ವಿಷಯವನ್ನು ಇತ್ಯರ್ಥಪಡಿಸಿದ್ದಾರೆ ಎಂದು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಈ ಮಧ್ಯೆ ಶಂಕರ್ ಅನ್ನು ವೆಲ್ಸ್ ಫಾರ್ಗೋ ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ನಮ್ಮ ಉದ್ಯೋಗಿಗಳು ವೃತ್ತಿಪರ ಹಾಗೂ ವೈಯಕ್ತಿಕವಾಗಿ ಉತ್ತಮ ನಡವಳಿಕೆಯನ್ನು ಹೊಂದಿದ್ದಾರೆ. ಇವರ ಮೇಲಿನ ಆರೋಪಗಳು ಕಂಪನಿಗೆ ಕೆಟ್ಟ ಹೆಸರನ್ನು ತಂದಿದೆ ಹೀಗಾಗಿ ಅವರನ್ನು ಕೆಲಸದಿಂದ ವಜಾ ಮಾಡುತ್ತಿರುವುದಾಗಿ ಕಂಪನಿ ಹೇಳಿಕೆಯಲ್ಲಿ ತಿಳಿಸಿತ್ತು.