ಅಭಿವೃದ್ಧಿಯೇ ಕಾಣದ ಬಂಟ್ವಾಳದಲ್ಲಿ ಬಿಜೆಪಿಯ ವಿಕಾಸ ಯಾತ್ರೆ ಹಾಸ್ಯಾಸ್ಪದ: ಇಲ್ಯಾಸ್ ತುಂಬೆ

Prasthutha|

ಬಂಟ್ವಾಳ: ಕಳೆದ ಐದು ವರ್ಷಗಳಿಂದ ಜನರ ಸಮಸ್ಯೆಯ ಹಾಗೂ ಸಂಕಷ್ಟಗಳ ಬಗ್ಗೆ ಅಧಿವೇಶನದಲ್ಲಿ ಒಂದೇ ಒಂದು ಶಬ್ದವೆತ್ತದೇ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನಡೆಸುತ್ತಿರುವ ವಿಕಾಸ ಯಾತ್ರೆ ಒಂದು ಹಾಸ್ಯಾಸ್ಪದವಾಗಿದೆ ಎಂದು ಬಂಟ್ವಾಳ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಟೀಕಿಸಿದ್ದಾರೆ.

- Advertisement -


ಸಜಿಪ ಮುನ್ನೂರು ಗ್ರಾಮದ ಮಲಾಯಿಬೆಟ್ಟು ಸಂಪರ್ಕಿಸುವ ರಸ್ತೆ ಹದಗೆಟ್ಟು ಹಲವು ವರ್ಷಗಳು ಕಳೆದಿವೆ. ಇದೇ ರಸ್ತೆಯಲ್ಲಿ ದಿನನಿತ್ಯ ನೂರಾರು ಮಂದಿ ನಾಗರಿಕರು ನಡೆದು ಹೋಗುತ್ತಾರೆ ಹಾಗೂ ವಾಹನ ಸಂಚಾರವೂ ಇದೆ. ಸರಕಾರದ ನಿಧಿಯಿಂದ ಈ ರಸ್ತೆಯನ್ನು ದುರಸ್ತಿಗೊಳಿಸಿ, ಸರಿಪಡಿಸುವ ಕನಿಷ್ಠ ಕಾಳಜಿಯನ್ನೂ ತೋರದ, ಈವರೆಗೆ ಗ್ರಾಮದ ಕಡೆಗೆ ತಿರುಗಿಯೂ ನೋಡದ ಬಂಟ್ವಾಳ ಶಾಸಕರು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಗ್ರಾಮ ವಿಕಾಸ ಯಾತ್ರೆ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


ಇವರ ಈ ನಾಟಕವನ್ನು ಬುದ್ಧಿವಂತ ಜನಸಾಮಾನ್ಯರು ಅರಿತಿದ್ದು, ಮುಂದೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

- Advertisement -



Join Whatsapp