►ಬಿಡುಗಡೆಯಾದ ಒಂದೇ ದಿನದಲ್ಲಿ ಸಾಕ್ಷ್ಯಚಿತ್ರ ಯೂಟ್ಯೂಬ್ ನಿಂದ ಡಿಲೀಟ್!
ಹೊಸದಿಲ್ಲಿ: 2002ರ ಗುಜರಾತ್ ಗಲಭೆ ಕುರಿತು ತನಿಖೆ ನಡೆಸಲು ಬ್ರಿಟಿಷ್ ಸರಕಾರ ಕಳುಹಿಸಿದ ತಂಡ, ಹತ್ಯಾಕಾಂಡಕ್ಕೆ ಕಾರಣವಾದ ‘ಶಿಕ್ಷೆ ರಹಿತ ವಾತಾವರಣ’ ನಿರ್ಮಾಣಕ್ಕೆ ರಾಜ್ಯದ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇರ ಹೊಣೆ ಎಂದು ಹೇಳಿರುವುದಾಗಿ ಬಿಬಿಸಿ ಬಿಡುಗಡೆಗೊಳಿಸಿದ ‘ದಿ ಮೋದಿ ಕ್ವಶ್ಚೈನ್’ ಎಂಬ ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಈ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದ ಒಂದೇ ದಿನದಲ್ಲಿ ಯುಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ.
2002ರ ಫೆಬ್ರವರಿ ಹಾಗೂ ಮಾರ್ಚ್ ವೇಳೆ ಗುಜರಾತ್ ನಲ್ಲಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿತ್ತು. ಈ ಗಲಭೆಯಲ್ಲಿ 790 ಮುಸ್ಲಿಮರು ಹಾಗೂ 254 ಹಿಂದೂಗಳು ಮೃತಪಟ್ಟಿದ್ದರು. ಮುಸ್ಲಿಮರನ್ನು ಗುರಿಪಡಿಸಿ ನಡೆಸಿದ ಹಿಂಸಾಚಾರವನ್ನು ತಡೆಯದಂತೆ ಗುಜರಾತ್ ಪೊಲೀಸರಿಗೆ ಮೋದಿ ಸೂಚಿಸಿದ್ದರು ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಹೇಳಿದೆ.
RSS ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ಈ ಹಿಂಸಾಚಾರವನ್ನು ಯೋಜಿಸಿದ್ದು, ಮೋದಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಗಲಭೆಯನ್ನು ತಡೆಯದಂತೆ ಆದೇಶಿಸಿದ್ದರು ಎಂದು ಬ್ರಿಟಿಷ್ ಸರಕಾರದ ತನಿಖಾ ತಂಡದ ವರದಿ ಹೇಳಿದೆ ಎಂದು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ.