ಉಪ್ಪಿನಂಗಡಿ | ಟಯರ್ ಅಂಗಡಿಯಲ್ಲಿ ಸ್ಫೋಟ: ಓರ್ವ ಸಾವು

Prasthutha|

ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೇಸರ್ ಸ್ಫೋಟಗೊಂಡ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಡೆದಿದೆ.

- Advertisement -


ಅಲಂಕಾರು ನಿವಾಸಿ ರಾಜೇಶ್ ಪೂಜಾರಿ (42) ಮೃತಪಟ್ಟವರು.


ಪೂಜಾರಿ ಅವರು ಬೆಳಗ್ಗೆ 11 ಗಂಟೆ ಸುಮಾರಿಗೆ ಟಯರ್ ರಿಸೋಲ್ ಮಾಡಿ ಅದಕ್ಕೆ ಗಾಳಿ ತುಂಬಿಸುತ್ತಿದ್ದಾಗ ಏರ್ ಕಂಪ್ರೇಸರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.



Join Whatsapp