ಸಂಘಪರಿವಾರವನ್ನು ಪ್ರಶ್ನೆ ಮಾಡಿದ್ದ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅಮಾನತು ಖಂಡನೀಯ: ಎಸ್‌’ಡಿಪಿಐ

Prasthutha|

ಪುತ್ತೂರು: ಭಜನೆ ಮಾಡುವವರನ್ನು ನಿಂದಿಸಿದ್ದಾರೆಂದು ಸುಳ್ಳಾರೋಪ ಹೊರಿಸಿ ಅರಣ್ಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದು ಖಂಡನೀಯ ಎಂದು ಎಸ್‌’ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್  ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಕೆಳ ವರ್ಗದ ಹೆಣ್ಣು ಮಕ್ಕಳ ಮೇಲೆ ಕಾಳಜಿ ವಹಿಸಿ ಹೇಳಿಕೆ ನೀಡಿದ್ದ ಮತ್ತು ತನ್ನ ಮನೆ ಅಂಗಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಸಂಘಪರಿವಾರವನ್ನು ಪ್ರಶ್ನೆ ಮಾಡಿದ್ದ ಅಧಿಕಾರಿಯ ಅಮಾನತು ಮಾಡಿರುವ ಸರ್ಕಾರದ ನಡೆಯು ದುರದೃಷ್ಟಕರ ಎಂದು ಹೇಳಿದ್ದಾರೆ.

ಸಂಘಪರಿವಾರದ ಸಂಚು, ಷಡ್ಯಂತರ ಹಾಗೂ ಅನಾಗರಿಕತೆಯನ್ನು ಪ್ರಶ್ನಿಸುವವರನ್ನು ಸರ್ಕಾರ ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸಿ ಸಂಘಪರಿವಾರದ ದುಷ್ಕೃತ್ಯಗಳಿಗೆ ಸರ್ಕಾರವೇ ನೇರ ಪ್ರೇರಣೆ ನೀಡುತ್ತಿದೆ. ಸಂಜೀವ ಪೂಜಾರಿಯವರ ಮನೆ ಅಂಗಳದಲ್ಲಿ ಬಾಂಬ್ ಸ್ಫೋಟ ನಡೆಸಿ UAPA ಕಾಯ್ದೆ ಹಾಕಿ NIAತನಿಖೆ ಒಪ್ಪಿಸಬೇಕಾದ ಪ್ರಕರಣಕ್ಕೆ ಸಮಾನವಾದ ಅಪರಾಧ ಸಂಘಪರಿವಾರ ಕಾರ್ಯಕರ್ತರು ಎಸಗಿದ್ದರು. ಅವರ ವಿರುದ್ಧ ಯವುದೇ ಕ್ರಮ ಕೈಗೊಳ್ಳದೆ ಸಂಜೀವ ಪೂಜಾರಿಯವರ ವಿರುದ್ಧ ಕ್ರಮ ಕೈಗೊಂಡಿರುವ ನಡೆ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕೂಡಲೇ ಸಂಜೀವ ಪೂಜಾರಿಯವರ ಅಮಾನತು ಆದೇಶವನ್ನು ರದ್ದು ಪಡಿಸಿ ಅವರ ಮನೆ ಮುಂದೆ ಬಾಂಬ್ ಸ್ಫೋಟ ನಡೆಸಿದ ಸಂಘಪರಿವಾರ ಕಾರ್ಯಕರ್ತರ ವಿರುದ್ಧ UAPA ಕಾಯ್ದೆ ಅಡಿ ಪ್ರಕರಣ ದಾಖಲಿಸಿ NIA ಗೆ ವಹಿಸಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp