ಐಟಿ ಕ್ಷೇತ್ರದಲ್ಲಿ ಪ್ರತಿ ದಿನ ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳ ಸಂಖ್ಯೆ ಎಷ್ಟು ಗೊತ್ತಾ?

Prasthutha|

ನವದೆಹಲಿ: ಜಾಗತಿಕ ಆರ್ಥಿಕ ಕುಸಿತದಿಂದಾಗಿ ಭಾರತ ಸೇರಿದಂತೆ ಜಾಗತಿಕವಾಗಿ ಕೆಲಸದಿಂದ ನೌಕರರ ವಜಾ ಹೆಚ್ಚುತ್ತಿದ್ದು, 2023ರಲ್ಲಿ ಜಾಗತಿಕವಾಗಿ ದಿನಕ್ಕೆ ಸರಾಸರಿ 1600ಕ್ಕೂ ಹೆಚ್ಚು ಐಟಿ ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.  

- Advertisement -

ಉದ್ಯೋಗ ಸಂಬಂಧಿ ಮಾಹಿತಿ ಒದಗಿಸುವ ಖಾಸಗಿ ವೆಬ್‌ಸೈಟ್ ವರದಿ ಪ್ರಕಾರ 2022ರಲ್ಲಿ 1,000ಕ್ಕೂ ಹೆಚ್ಚು ಕಂಪನಿಗಳು 1,54,336 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ. ಈ ತಿಂಗಳ ಮೊದಲ 15 ದಿನಗಳಲ್ಲಿ 91 ಕಂಪನಿಗಳು 24,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ. ಅಮೆಜಾನ್ ಭಾರತದಲ್ಲಿ ಸುಮಾರು 1,000 ಮಂದಿ ಸೇರಿದಂತೆ ಜಾಗತಿಕವಾಗಿ 18,000 ನೌಕರರನ್ನು ವಜಾಗೊಳಿಸುವುದಾಗಿ ಘೋಷಿಸಿದೆ.



Join Whatsapp