ಉಪ್ಪಳ: ಉಪ್ಪಳ – ನಯಾಬಜಾರ್ ಭಾಗದಲ್ಲಿ ಹಾಗೂ ಪಟ್ಟಣದ ವಿವಿಧೆಡೆ ಮಾಲಿನ್ಯ ಶೇಖರಣೆಯಾಗುತ್ತಿದ್ದರೂ ಮಂಗಲ್ಪಾಡಿ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು SDPI ಮಂಗಲ್ಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಇಂತಿಯಾಝ್ ಉಪ್ಪಳ ತಿಳಿಸಿದರು.
ಪರಿಸರ ಮಾಲಿನ್ಯದ ಜೊತೆಗೆ ವಾಯು ಮಾಲಿನ್ಯವೂ ಆಗುತ್ತಿದೆ. ರಾತ್ರಿಯಲ್ಲಿ ಸುಡುವ ಕಸದ ಹೊಗೆಯನ್ನೇ ಗಂಟೆಗಟ್ಟಲೆ ಉಸಿರಾಡಬೇಕಾದ ಪರಿಸ್ಥಿತಿ ಇಲ್ಲಿನ ನಿವಾಸಿಗಳದ್ದು. ಪಂಚಾಯತಿನ ಮೌನಾನುಮತಿಯ ಮೇರೆಗೆ ಕಸದ ರಾಶಿಗಳಿಗೆ ಬೆಂಕಿ ಹಚ್ಚಿರುವ ಶಂಕೆಯೂ ವ್ಯಕ್ತವಾಗಿದೆ. ಜನರ ಆರೋಗ್ಯ ಮತ್ತು ನಗರ ನೈರ್ಮಲ್ಯದಲ್ಲಿ ಚೆಲ್ಲಾಟ ಆಡುವ ಪಂಚಾಯಿತಿ ಅಧಿಕಾರಿಗಳು ತಮ್ಮ ಉಡಾಥಯ ವರ್ತನೆ ನಿಲ್ಲಿಸಿ, ತಕ್ಷಣವೇ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಎಸ್.ಡಿ.ಪಿ.ಐ ಮಂಗಲ್ಪಾಡಿ ಪಂಚಾಯತ್ ಸಮಿತಿ ಸಾರ್ವಜನಿಕರನ್ನು ಒಗ್ಗೂಡಿಸಿ ಸೃಜನಾತ್ಮಕ ಹೋರಾಟ ಕಾರ್ಯಕ್ರಮಗಳ ನೇತೃತ್ವ ವಹಿಸಲಿದೆ ಎಂದು ಅಧ್ಯಕ್ಷ ಇಂತಿಯಾಝ್ ಉಪ್ಪಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.