ಬಿಜೆಪಿ ಕಾರ್ಯಕರ್ತನಿಂದ ಪ್ರೀತಿಯ ನಾಟಕವಾಡಿ ಮೋಸ: ಅಪ್ರಾಪ್ತ ಬಾಲಕಿ ಆತ್ಮಹತ್ಯೆ

Prasthutha|

ಚಿಕ್ಕಮಗಳೂರು: ಪ್ರೀತಿಸುವ ನಾಟಕವಾಡಿ ವಂಚಿಸಿದ ಬಿಜೆಪಿ ಕಾರ್ಯಕರ್ತನ ಕೃತ್ಯದಿಂದ ಮನನೊಂದು ಅಪ್ರಾಪ್ತ ಬಾಲಕಿಯೊಬ್ಬಳು, ಡೆಟ್ ನೋಟ್ ನಲ್ಲಿ ಆತನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

- Advertisement -

ಕಳಸ ತಾಲೂಕಿನ ಜೋಗಿಕುಂಬ್ರಿ ನಿವಾಸಿ, ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪ್ತಿ (17) ಮೃತ ಬಾಲಕಿ. ಆರೋಪಿ ಬಿಜೆಪಿ ಕಾರ್ಯಕರ್ತ, ಎಸ್.ಕೆ ಮೇಗಲ್ ಗ್ರಾಮದ ನಿತೇಶ್ (25) ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಂತಪ್ಪ ಗೌಡ ಎಂಬವರ ಮಗ ನಿತೇಶ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಬಾಲಕಿಯ ತಂದೆ ಚನ್ನಪ್ಪ ಗೌಡ ಅವರು  ಕುದುರೆಮುಖ ಠಾಣೆಗೆ ದೂರು ನೀಡಿದ್ದಾರೆ.

- Advertisement -

ಹಿತೇಶ್ ಕೆಲವು ತಿಂಗಳುಗಳಿಂದ ದೀಪ್ತಿಯ ಹಿಂದೆ ಬಿದ್ದು ಪ್ರೀತಿಯ ನಾಟಕವಾಡಿದ್ದ. ನಾನು ಮೋಸ ಹೋಗಿದ್ದೇನೆ ಎಂದು ಅರಿವಾದ ಬಳಿಕ ಜನವರಿ 10ರಂದು ಕಾಲೇಜಿನಿಂದ ಮನೆಗೆ ಬಂದ ದೀಪ್ತಿ ಕಳೆನಾಶಕ ಸೇವಿಸಿದ್ದಾಳೆ. ಬಳಿಕ ಮನೆಯಲ್ಲಿದ್ದ ಅಪ್ಪ-ಅಮ್ಮನಿಗೆ ವಿಷಯ ತಿಳಿಸಿದ್ದಾಳೆ.

ಪೋಷಕರು ಕೂಡಲೇ ಕಳಸ ತಾಲೂಕು ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.  ಆದರೆ ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ದೀಪ್ತಿ ಜನವರಿ 14ರಂದು ಮಂಗಳೂರಿನ ಏ.ಜೆ.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಸಾಯುವ ಕೊನೆಯ ಕ್ಷಣದಲ್ಲಿ ಡೆತ್ ನೋಟ್ ಬರೆದಿರುವ ಬಾಲಕಿ, ನನಗೆ ನಿತೇಶ್ ಮೋಸ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ.

ಆರೋಪಿ ನಿತೇಶ್ ವಿರುದ್ಧ ದೂರು ದಾಖಲಿಸದೇ ಸತಾಯಿಸಿದ ಕುದುರೆ ಮುಖ ಪೊಲೀಸರಿಗೆ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ಬಳಿಕ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.   ಪೊಲೀಸರ ನಿರ್ಲಕ್ಷ್ಯಕ್ಕೆ ಪೋಷಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp