ಬೆಂಗಳೂರು: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಮಂಗಳೂರಿನ ಯುವ ನ್ಯಾಯವಾದಿ ರಾಹುಲ್ ಶೆಟ್ಟಿಗಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಅದೇ ರೀತಿ ಪುತ್ತೂರಿನ ಯುವ ವಕೀಲ ತ್ವಾಹ ಖಲೀಲ್ ಕೆ.ಎ. ಅವರು ಕೂಡ ಪರೀಕ್ಷೆಯನ್ನು ಉತ್ತೀರ್ಣರಾಗುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಕುಶಾಲನಗರದ ಅಬೂತಾಹಿರ್ ಕೂಡ ನ್ಯಾಯಾಧೀಶರಾಗಿ ಆಯ್ಕೆಯಗೊಂಡಿದ್ದಾರೆ. ಈ ಬಾರಿ ಒಟ್ಟು 40 ಮಂದಿ ವಕೀಲರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.