ರಾಮನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ರೌಡಿಸಂ, ಬಿಜೆಪಿ ವಿರುದ್ಧ ಯಾರಾದಾರೂ ಮಾತನಾಡಿದರೆ ಅವರ ಕಥೆ ಅಷ್ಟೆ ಎಂದು ಬಿಜೆಪಿ ಎಂಎಲ್ ಸಿ ಯೋಗೇಶ್ವರ್ ಹೇಳಿದ್ದಾರೆ ಎನ್ನಲಾದ ಸ್ಫೋಟಕ ಆಡಿಯೋವೊಂದು ವೈರಲ್ ಆಗಿದೆ.
ರಾಜ್ಯ ವಿಧಾನ ಸಭಾ ಚುನಾವಣೆಯ ಹೊತ್ತಲ್ಲೇ ಸ್ಫೋಟಕ ಆಡಿಯೋ ವೈರಲ್ ಆಗಿದ್ದು, ಸಚಿವರಾದ ಅಶ್ವತ್ಥ್ ನಾರಾಯಣ್, ಆರ್.ಅಶೋಕ್’ ಗೆ ಸವಾಲ್ ಹಾಕಿದ್ದಾರೆ. ನಾನು ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುತ್ತೇನೆ. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಈ ಬಾರಿ ಜನಾಭಿಪ್ರಾಯದ ಮೂಲಕ ಬಿಜೆಪಿ ಸರ್ಕಾರ ಬರೋದಿಲ್ಲ ಎಂದು ಯೋಗೇಶ್ವರ್ ಆಡಿಯೋದಲ್ಲಿ ಹೇಳಿದ್ದಾರೆ.