ಕಾರಿನಡಿ ಸಿಲುಕಿರುವ ಮಹಿಳೆಯನ್ನು ಎಳೆದೊಯ್ದ ಪ್ರಕರಣ: ನಿರ್ಲಕ್ಷ್ಯ ತೋರಿದ 11 ದೆಹಲಿ ಪೊಲೀಸರ ಅಮಾನತು

Prasthutha|

ಹೊಸದಿಲ್ಲಿ: ಹೊಸ ವರ್ಷದಂದು ಕಾರಿನಡಿ ಸಿಲುಕಿರುವ 20ರ ಹರೆಯದ ಅಂಜಲಿ ಸಿಂಗ್‌ ಅವರನ್ನು ಎಳೆದೊಯ್ದ ಮಾರ್ಗದಲ್ಲಿ ಮೂರು ಪಿಸಿಆರ್‌ ವ್ಯಾನ್‌ಗಳು ಮತ್ತು ಎರಡು ಪಿಕೆಟ್‌ಗಳಲ್ಲಿ ನಿಯೋಜಿಸಲಾಗಿದ್ದ ಎಲ್ಲ ಪೊಲೀಸರನ್ನು ನಿರ್ಲಕ್ಷ್ಯ ತೋರಿದಕ್ಕಾಗಿ ಅಮಾನತುಗೊಳಿಸುವಂತೆ ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಇವರೆಲ್ಲರೂ ರೋಹಿಣಿ ಜಿಲ್ಲೆಯ ಪೊಲೀಸರಾಗಿದ್ದು, ಈ ಭಯಾನಕ ಘಟನೆ ನಡೆದ ದೆಹಲಿಯ ಕಂಝವಾಲಾ ಪ್ರದೇಶವನ್ನು ನೋಡಿಕೊಳ್ಳಲು ನಿಯೋಜಿಸಲಾಗಿತ್ತು.

- Advertisement -


ಅಮಾನತುಗೊಂಡಿರುವ ಸಿಬ್ಬಂದಿಗಳಲ್ಲಿ ಇಬ್ಬರು ಸಬ್‌’ಇನ್‌’ಸ್ಪೆಕ್ಟರ್‌ಗಳು, ನಾಲ್ವರು ಸಹಾಯಕ ಸಬ್‌’ಇನ್‌’ಸ್ಪೆಕ್ಟರ್‌ಗಳು, ನಾಲ್ವರು ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು ಒಬ್ಬ ಕಾನ್‌’ಸ್ಟೆಬಲ್ ಸೇರಿದ್ದಾರೆ. ಅವರಲ್ಲಿ ಆರು ಮಂದಿಯನ್ನು ಪಿಸಿಆರ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಮತ್ತು ಐವರು ಪಿಕೆಟ್‌ಗಳನ್ನು ನಿರ್ವಹಿಸುತ್ತಿದ್ದರು.
ದೆಹಲಿ ಪೊಲೀಸ್ ವಿಶೇಷ ಕಮಿಷನರ್ ಶಾಲಿನಿ ಸಿಂಗ್ ಅವರ ತನಿಖೆಯಲ್ಲಿ ಪೊಲೀಸ್ ಸಿಬ್ಬಂದಿ ತಪ್ಪಿತಸ್ಥರೆಂದು ಕಂಡುಬಂದಿದೆ. ನಂತರ ಗೃಹ ಸಚಿವರು ದೆಹಲಿಯ ಉನ್ನತ ಪೋಲೀಸ್ ಅಧಿಕಾರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವಂತೆ ಸೂಚಿಸಿದರು. ಪ್ರಥಮ ಮಾಹಿತಿ ವರದಿಯಲ್ಲಿ ಕೊಲೆ ಆರೋಪಗಳನ್ನು ಸೇರಿಸುವಂತೆಯೂ ಸಚಿವಾಲಯ ನಿರ್ದೇಶಿಸಿದೆ.



Join Whatsapp