ನವದೆಹಲಿ: ವಕೀಲ ನೀಲಾ ಗೋಖಲೆಯವರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆಗೇರಿಸಲು ನ್ಯಾಯಾಲಯದ ಕೊಲಿಜಿಯಂ ಒಪ್ಪಿಗೆ ಸೂಚಿಸಿದೆ.
2008ರಲ್ಲಿ 6 ಜನರ ಸಾವು ಮತ್ತು 101 ಜನರು ಗಾಯಗೊಳ್ಳುವುದಕ್ಕೆ ಕಾರಣವಾದ ಮಾಲೆಗಾಂವ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಪರ ಹಾಜರಾಗುತ್ತಿರುವುದು ಇದೇ ನೀಲಾ ಗೋಖಲೆ.
“ಜನವರಿ 10, 2023ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮೀಟಿಂಗಿನಲ್ಲಿ ಬಾಂಬೆ ಹೈಕೋರ್ಟಿನ ವಕೀಲೆಯಾದ ನೀಲಾ ಗೋಖಲೆಯವರನ್ನು ನ್ಯಾಯಾಧೀಶೆ ಹುದ್ದೆಗೇರಿಸಲು ಬಂದ ಪ್ರಸ್ತಾಪವನ್ನು ಒಪ್ಪಿಕೊಳ್ಳಲಾಗಿದೆ” ಎಂದು ಕೊಲಿಜಿಯಂ ಮುಖ್ಯಸ್ಥರು ಹಾಗೂ ಸಿಜೆಐ ಆದ ಡಿ. ವೈ. ಚಂದ್ರಚೂಡ್ ಹೇಳಿದ್ದಾರೆ.
ಈ ಶಿಫಾರಸು ಇನ್ನು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದಿಂದ ಅಂತಿಮಗೊಳಿಸಬೇಕಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈಗ 65 ಮಂದಿ ನ್ಯಾಯಾಧೀಶರಿದ್ದಾರೆ.
ಯಾವ ಬಗೆಯಲ್ಲಿ ಸ್ಫೋಟದ ಪ್ರಕರಣದಲ್ಲಿ ಪುರೋಹಿತ್’ರನ್ನು ಶಿಕ್ಷಿಸಲಾಗುವುದು ಎಂಬುದಕ್ಕೆ ಸವಾಲು ಹಾಕಿದ ಪತ್ರದೊಡನೆ ನೀಲಾ ಗೋಖಲೆಯವರು ಉಚ್ಚ ನ್ಯಾಯಾಲಯಕ್ಕೆ ಈಗ ಬಿಡುಗಡೆಯ ಪತ್ರ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ 197ರಡಿ (ಜಡ್ಜ್ ಮತ್ತು ಸಾರ್ವಜನಿಕ ಸೇವಕರ ತನಿಖಾ ನಿಯಮ) ಮಿಸ್ಟರ್ ಪುರೋಹಿತ್ ರನ್ನು ಸರಿಯಾದ ರೀತಿಯಲ್ಲಿ ನಿರೂಪಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದು ವಕೀಲೆ ನೀಲಾ ಸಲ್ಲಿಸಿದ್ದ ಅರ್ಜಿಯನ್ನು 2023ರ ಜನವರಿ 2ರಂದು ಬಾಂಬೆ ಹೈ ಕೋರ್ಟ್ ತಿರಸ್ಕರಿಸಿತ್ತು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸೂಕ್ಷ್ಮ ಪಟ್ಟಣ ಪ್ರದೇಶವಾದ ಮಾಲೆಗಾಂವ್’ನಲ್ಲಿ 2008ರ ಸೆಪ್ಟೆಂಬರ್ 29ರಂದು ಬೈಕ್ ನಲ್ಲಿರಿಸಿದ್ದ ಸ್ಫೋಟಕಗಳು ಸ್ಫೋಟಗೊಂಡು 6 ಜನರು ಸತ್ತರೆ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮುಸ್ಲಿಮರ ಪವಿತ್ರ ತಿಂಗಳು ರಂಝಾನ್ ವೇಳೆ ಈ ಸ್ಫೊಟ ನಡೆದಿದ್ದು, ಸ್ಫೋಟಿಸಲು ಬಳಸಿದ ಎಲ್ ಎಂಎಲ್ ಫ್ರೀಡಂ ಸ್ಕೂಟರ್ ಈಗಿನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೆಸರಿನಲ್ಲಿ ನೋಂದಣಿಯಾಗಿದ್ದುದನ್ನುಎನ್ ಐಎ ಪತ್ತೆ ಹಚ್ಚಿತ್ತು.