ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ‘ಸರ್‘, ‘ಮೇಡಂ‘ ಎಂದು ಕರೆಯುವಂತಿಲ್ಲ

Prasthutha|

ತಿರುವನಂತಪುರಂ: ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ‘ಸರ್, ‘ಮೇಡಂ‘ ಎಂದು ಕರೆಯುವಂತಿಲ್ಲ, ಅದರ ಬದಲು ‘ಟೀಚರ್‘ ಎಂದು ಸಂಬೋಧಿಸುವಂತೆ ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನಿರ್ದೇಶನ ನೀಡಿದೆ.

- Advertisement -


‘ಸರ್‘, ‘ಮೇಡಂ‘ ಅನ್ನುವುದಕ್ಕಿಂತ ‘ಟೀಚರ್‘ ಎನ್ನುವ ಪದ ‘ಲಿಂಗ ತಟಸ್ಥ‘ವಾಗಿರುವುದರಿಂದ ಹೀಗೆ ಕರೆಯಬೇಕು ಎಂದು ಸೂಚಿಸಿದೆ. ಅಲ್ಲದೇ ಶಿಕ್ಷಕರು ಕೂಡ ಈ ಪದಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದಿದೆ.


ಆಯೋಗದ ಮುಖ್ಯಸ್ಥರಾದ ಕೆ.ವಿ ಮನೋಜ್ ಕುಮಾರ್ ಹಾಗೂ ಸದಸ್ಯ ಸಿ. ವಿಜಯ್ ಕುಮಾರ್ ಅವರು, ರಾಜ್ಯದ ಶಿಕ್ಷಣ ಇಲಾಖೆಗೆ ಈ ನಿರ್ದೇಶನ ನೀಡಿದ್ದಾರೆ.



Join Whatsapp