PFI ಕಾರ್ಯಕರ್ತ ಅಬ್ದುಲ್ಲಾ ಸೌದ್ ಅನ್ಸಾರಿಗೆ ಜಾಮೀನು

Prasthutha|

ನವದೆಹಲಿ: PFI ಸದಸ್ಯ ಎಂಬ ಕಾರಣಕ್ಕೆ ಬಂಧಿಸಲ್ಪಟ್ಟ ಅಬ್ದುಲ್ಲಾ ಸೌದ್ ಅನ್ಸಾರಿಗೆ ಎನ್’ಐಎ ಲಕ್ನೋ ಕೋರ್ಟ್  ಜಾಮೀನು ನೀಡಿದೆ.

- Advertisement -

ಪಿಎಫ್’ಐ ಸಂಘಟನೆಯ ಸಕ್ರಿಯ ಸದಸ್ಯ ಎಂಬ ಆರೋಪದ ಮೇಲೆ 30.09.2022 ರಂದು ಅನ್ಸಾರಿಯನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು.

ಅರ್ಜಿದಾರರನ್ನು ತಪ್ಪಾಗಿ ಸಿಲುಕಿಸಲಾಗಿದೆ. ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಅನ್ಸಾರಿ ಅವರ ಕುಟುಂಬಕ್ಕೆ ಯಾವುದೇ ಮಾಹಿತಿಯನ್ನು ನೀಡದೆ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿತ್ತು. ಇದು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 ಎ ಯ ನೇರ ಉಲ್ಲಂಘನೆಯಾಗಿದೆ ಎಂದು ವಕೀಲರು ವಾದಿಸಿದ್ದರು.

- Advertisement -

ಪಿಎಫ್’ಐಯೊಂದಿಗೆ ಅನ್ಸಾರಿಯ ಸಂಬಂಧವನ್ನು ಸಾಬೀತುಪಡಿಸಲು ತನಿಖಾಧಿಕಾರಿಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಅವರ ಮೊಬೈಲ್’ನಲ್ಲಿ  ಸಿಕ್ಕಿದ ಇತರ ದಾಖಲೆಗಳು ಯಾವುದೇ ಅನುಮಾನಾಸ್ಪದ ದೇಶವಿರೋಧಿ ಚಟುವಟಿಕೆಗಳನ್ನು ಸಾಬೀತುಪಡಿಸುವಂತಹದ್ದಲ್ಲ ಎಂದು ವಕೀಲರು ವಾದಿಸಿದ್ದಾರೆ.

ಇದನ್ನು ಮಾನ್ಯ ಮಾಡಿದ ನ್ಯಾಯಾಲಯವು,  50,000 ಜಾಮೀನು ಬಾಂಡ್ ಮತ್ತು ಅಷ್ಟೇ ಮೊತ್ತದ 2 ಶ್ಯೂರಿಟಿಗಳ ಆಧಾರದಲ್ಲಿ ಅನ್ಸಾರಿಗೆ ಜಾಮೀನು ನೀಡಿದೆ.



Join Whatsapp