ಐಪಿಎಲ್ ಸೀಸನ್ 16ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಆಡದಿದ್ದರೂ ಬರೋಬ್ಬರಿ 21 ಕೋಟಿ ರೂ. ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ರಿಷಭ್ ಪಂತ್ ಕಳೆದ ಬಾರಿಯ ಒಪ್ಪಂದಂತೆ ಈ ಸಲ ಐಪಿಎಲ್ ಫ್ರಾಂಚೈಸಿಯಿಂದ 16 ಕೋಟಿ ರೂ. ಪಡೆಯಬೇಕಿತ್ತು. ಇದೀಗ ಈ ಮೊತ್ತವನ್ನು ಬಿಸಿಸಿಐ ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಆಟಗಾರರ ಗುತ್ತಿಗೆಯಿಂದ ನೀಡಲಾಗುವ 5 ಕೋಟಿ ರೂ. ಅನ್ನು ಸಹ ಬಿಸಿಸಿಐ ಪಾವತಿಸಲಿದೆ ಎಂದು ವರದಿಯಾಗಿದೆ.
ಬಿಸಿಸಿಐ ರಿಷಭ್ ಪಂತ್ ವೈದ್ಯಕೀಯ ವೆಚ್ಚಗಳನ್ನು ಭರಿಸುವುದಾಗಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೆ ಈ ಹಿಂದಿನ ಒಪ್ಪಂದಂತೆ ಅವರಿಗೆ ನೀಡಬೇಕಾದ ಮೊತ್ತವನ್ನೂ ಕೂಡ ಬಿಸಿಸಿಐ ನೀಡಲಿದೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಅಂದರೆ ಐಪಿಎಲ್ ಹಾಗೂ ಬಿಸಿಸಿಐ ಒಪ್ಪಂದ ಪ್ರಕಾರ ಈ ವರ್ಷ ರಿಷಭ್ ಪಂತ್ ಪಡೆಯಬೇಕಿದ್ದ ಸಂಪೂರ್ಣ ಮೊತ್ತವನ್ನು ಬಿಸಿಸಿಐ ಪಾವತಿಸಲಿದೆ. ಅದರಂತೆ ಈ ವರ್ಷ ರಿಷಭ್ ಪಂತ್ ಒಟ್ಟು 21 ಕೋಟಿ ರೂ. ಪಡೆಯಲಿದ್ದಾರೆ.