►ಜ.12 ರಿಂದ 16 ರ ವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ
ಧಾರವಾಡ: ಅವಳಿ ನಗರದಲ್ಲಿ ಜ.12 ರಿಂದ 16 ರ ವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರತಿನಿಧಿಗಳ ಆಗಮನ ಆರಂಭಗೊಂಡಿದ್ದು, ಇಂದು ಭಾರತದ ಮುಕುಟ ಪ್ರಾಯ ರಾಜ್ಯ ಜಮ್ಮು ಕಾಶ್ಮೀರದಿಂದ ಮೊದಲ ತಂಡ ಆಗಮಿಸಿತು.
ಯುವ ಪ್ರತಿನಿಧಿಗಳು ಮತ್ತು ತಂಡದ ನಾಯಕರನ್ನೊಳಗೊಂಡ 80 ಸದಸ್ಯರ ತಂಡಕ್ಕೆ ಅದ್ದೂರಿ ಮತ್ತು ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಕೆ.ಸಿ.ಡಿ ಕಾಲೇಜಿನ ಆವರಣದಲ್ಲಿ ಯುವ ಜನೋತ್ಸವದ ವಸತಿ ಉಸ್ತುವಾರಿ ಅಧಿಕಾರಿ ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯಯದ ಕುಲ ಸಚಿವ ಯಶಪಾಲ್ ಕ್ಷೀರಸಾಗರ ಹಾಗೂ ಹುಡಾ ಆಯುಕ್ತರಾದ ಸಂತೋಷ ಬಿರಾದಾರ ಹಾಗೂ ಇನ್ನಿತರ ಅಧಿಕಾರಿಗಳು ಜಮ್ಮು ಕಾಶ್ಮೀರದ ತಂಡವನ್ನು ಬರಮಾಡಿಕೊಂಡರು.
ರಂಗಾಯಣದ ಕಲಾತಂಡ, ಡೊಳ್ಳು, ಇನ್ನಿತರ ವಾದ್ಯಗಳೊಂದಿಗೆ ಪ್ರತಿನಿಧಿಗಳಿಗೆ ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು.
ನಂತರ ಯಶಪಾಲ್ ಕ್ಷೀರಸಾಗರ ಪ್ರತಿನಿಧಿಗಳಿಗೆ ಯುವಜನೋತ್ಸವದ ಮಾರ್ಗಸೂಚಿ ಹಾಗೂ ಕಿಟ್ ಗಳನ್ನು ವಿತರಿಸಿದರು. ನಂತರ ಪ್ರತಿನಿಧಿಗಳನ್ನು ಕೃಷಿ ವಿಶ್ವವಿದ್ಯಾಲಯದ ವಸತಿ ಕೊಠಡಿಗಳಿಗೆ ಕರೆದೊಯ್ಯಲಾಯಿತು.