ಹಾಂಕಾಂಗ್: ಚೀನದ ಜನಪ್ರಿಯ ಉದ್ಯಮಿ ಜಾಕ್ ಮಾ ತಾವೇ ಸ್ಥಾಪಿಸಿದ ಆ್ಯಂಟ್ ಸಮೂಹಕ್ಕೆ ವಿದಾಯ ಘೋಷಿಸಿದ್ದು, ಅದರ ಮಾಲೀಕತ್ವವನ್ನು ಚೀನಾ ಸರಕಾರವೇ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಚೀನಾ ಸರಕಾರ ಖಾಸಗಿ ಕ್ಷೇತ್ರದ ಹೂಡಿಕೆ ಮೇಲೆ ಹಲವು ನಿರ್ಬಂಧಗಳನ್ನು ಹೇರಿರುವ ಕಾರಣ, ಆ್ಯಂಟ್ ಸಮೂಹದ ಮೇಲಿನ ಹಿಡಿತವನ್ನು ಜ್ಯಾಕ್ ಮಾ ಬಿಟ್ಟುಕೊಡಲಿದ್ದಾರೆ. ಜಾಕ್ ಮಾ ಅವರು ಪರೋಕ್ಷವಾಗಿ ಆ್ಯಂಟ್‌ನ ಶೇ 53.46ರಷ್ಟು ಷೇರುಗಳ ಮೇಲೆ ನಿಯಂತ್ರಣ ಹೊಂದಿದ್ದರು.
ಮಾ ಅವರು 2020ರ ಅಕ್ಟೋಬರ್ ನಲ್ಲಿ ಶಾಂಘೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಚೀನಾದ ಹಣಕಾಸು ವ್ಯವಸ್ಥೆಯ ಬಗ್ಗೆ ಕಟು ವಿಮರ್ಶೆಯ ಮಾತುಗಳನ್ನು ಆಡಿದ್ದರು. ಮಾ ಅವರ ಆ್ಯಂಟ್ ಕಂಪನಿ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ (ಐಪಿಒ) ಪ್ರಕ್ರಿಯೆಯನ್ನು ಚೀನಾದ ಅಧಿಕಾರಿಗಳು ರದ್ದು ಮಾಡಿದ್ದರು. ಇದು ಮಾ ಅವರ ಕಟು ಮಾತಿಗೆ ಸಿಕ್ಕ ಪ್ರತಿಕ್ರಿಯೆ ಎಂದು ಪರಿಗಣಿಸಲಾಗಿತ್ತು.