ಶೂಟಿಂಗ್ ಬಿಡುವಿನ ವೇಳೆ ಸ್ನಾನಕ್ಕೆಂದು ಹೋದ ಮಲಯಾಳಂ ಖ್ಯಾತ ನಟ ಅನಿಲ್ ನೆಡುಮಂಗಾಡ್ ದುರಂತ ಸಾವು

Prasthutha|

ಕೊಚ್ಚಿ : ಖ್ಯಾತ ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಅಣೆಕಟ್ಟು ನೀರಿನಲ್ಲಿ ಮುಳುಗಿ ಆಕಸ್ಮಿಕ ಸಾವಿಗೀಡಾಗಿದ್ದಾರೆ. ಕೇರಳದ ತೊಡುಪುಳದ ಮಲಂಕರ ಅಣೆಕಟ್ಟಿನಲ್ಲಿ ಈ ದುರಂತ ಸಂಭವಿಸಿದೆ.

- Advertisement -

ಶೂಟಿಂಗ್ ಬಿಡುವಿನ ವೇಳೆ ಅನಿಲ್ ಸ್ನೇಹಿತರ ಜೊತೆ ಸ್ನಾನಕ್ಕೆಂದು ಡ್ಯಾಂಗೆ ತೆರಳಿದ್ದರು. ಈ ವೇಳೆ ನೀರಿನ ಹರಿವು ಹೆಚ್ಚಾಗಿ ಅನಿಲ್ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಅಯ್ಯಪನುಮ್ ಕೋಶಿಯುಮ್, ಕಮಟ್ಟಿಪಾದಮ್ ಮತ್ತು ಪಾವಡ ಸೇರಿದಂತೆ ಹಲವು ಜನಪ್ರಿಯ ಸಿನೆಮಾಗಳಲ್ಲಿ ನಟಿಸಿ ಅನಿಲ್ ಗಮನ ಸೆಳೆದಿದ್ದರು. ತಮ್ಮ ಮುಂದಿನ ಸಿನೆಮಾ ಜೊಜು ಜಾರ್ಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅನಿಲ್ ನಟಿಸುತ್ತಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ದುರಂತ ಸಂಭವಿಸಿದೆ.

- Advertisement -

ಅನಿಲ್ ಸಾವಿಗೆ ಮಲಯಾಳಂ ಸಿನೆಮಾ ಇಂಡಸ್ಟ್ರಿ ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.

Join Whatsapp