ಯುಎಸ್’ಎ ವಿಜ್ಞಾನಿಗಳನ್ನು ಗುರಿ ಮಾಡಿದ ರಷ್ಯಾ ಹ್ಯಾಕರ್’ಗಳು

Prasthutha|

ನವದೆಹಲಿ: ಕೋಲ್ಡ್ ರಿವರ್ ಎಂಬ ರಷ್ಯಾದ ಹ್ಯಾಕರ್’ಗಳ ತಂಡವೊಂದು ಅಮೆರಿಕ ಸಂಯುಕ್ತ ಸಂಸ್ಥಾನದ ಪರಮಾಣು ಸಂಶೋಧನಾ ಪ್ರಯೋಗಾಲಯಗಳನ್ನು ಗುರಿಯಿಟ್ಟು ಹ್ಯಾಕ್ ಮಾಡಿರುವುದಾಗಿ ಐವರು ಸೈಬರ್ ತಜ್ಞ ಸಂಸ್ಥೆಗಳು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

- Advertisement -


ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ರಷ್ಯಾವು ತನ್ನ ಪ್ರದೇಶವನ್ನು ಉಳಿಸಿಕೊಳ್ಳಲು ಸಮಯ ಬಂದರೆ ಪರಮಾಣು ಅಸ್ತ್ರಗಳನ್ನು ಬಳಸುತ್ತದೆ ಎಂದು ಹೇಳಿದ್ದರು. ಇದೇ ಸಮಯದಲ್ಲಿ ಬಿಎನ್’ಎಲ್- ಬ್ರೂಕ್ ಹೆವನ್, ಎಎನ್’ಎಲ್- ಆರೋಗೋನ್, ಎಲ್’ಎಲ್’ಎನ್’ಎಲ್- ಲಾರೆನ್ಸ್ ಲಿವರ್ಮೋರ್ ನ್ಯಾಶನಲ್ ಲ್ಯಾಬೋರೆಟರೀಸ್ ಇವುಗಳನ್ನು ಗುರಿಯಾಗಿಸಿಕೊಂಡು ಕೋಲ್ಡ್ ರಿವರ್ ತಂಡವು ನಕಲಿ ಲಾಗಿನ್ ಪುಟಗಳ ಮೂಲಕ ಈಮೇಲ್’ಗಳನ್ನು ಪಾಸ್ವರ್ಡ್ ಪಡೆಯಲು ವಿಜ್ಞಾನಿಗಳಿಗೆ ಕಳುಹಿಸಿವೆ.


ಇದನ್ನು ತೀರಾ ಖಚಿತಪಡಿಸಿಕೊಳ್ಳಲು ರಾಯಿಟರ್ಸ್’ಗೆ ಸಾಧ್ಯವಾಗಿಲ್ಲ. ಯಾವುದಾದರೂ ಮಾಹಿತಿ ಕಳುವಾಗಿದೆಯೇ ಎಂಬುದನ್ನು ತಿಳಿಯಲು ಕೂಡ ಸಾಧ್ಯವಾಗಿಲ್ಲ. ಬಿಎನ್’ಎಲ್ ವಕ್ತಾರರು ಈ ಸುದ್ದಿಯನ್ನೇ ಅಲ್ಲಗಳೆದಿದ್ದಾರೆ. ಈ ಬಗ್ಗೆ ಎಲ್’ಎಲ್’ಎನ್’ಎಲ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಯುಎಸ್’ಎಯ ಇಂದನ ಇಲಾಖೆಗೆ ಎಎನ್’ಎಲ್ ಈ ವಿಷಯ ರವಾನಿಸಿದ್ದರೂ ಅವರು ಕೂಡ ಪ್ರತಿಕ್ರಿಯಿಸಲು ಮುಂದೆ ಬಂದಿಲ್ಲ.

- Advertisement -


ಉಕ್ರೇನ್ ಮೇಲೆ ರಷ್ಯಾದ ಯುದ್ಧ ಆರಂಭವಾದಾಗಿನಿಂದಲೂ ಕೋಲ್ಡ್ ರಿವರ್ ತಂಡವು ಉಕ್ರೇನಿನ ಮಿತ್ರ ರಾಷ್ಟ್ರಗಳ ಸುತ್ತ ತನ್ನ ಹ್ಯಾಕ್ ಅಸ್ತ್ರ ಹೂಡಿರುವುದಾಗಿ ಸೈಬರ್ ಸೆಕ್ಯೂರಿಟಿ ಸಂಶೋಧಕರು ಹೇಳಿದ್ದಾರೆ. ರಷ್ಯಾವು ಹತೋಟಿಗೆ ತೆಗೆದುಕೊಂಡಿರುವ ಉಕ್ರೇನಿನ ಭಾಗದಲ್ಲಿ ಯೂರೋಪಿನ ಅತಿ ದೊಡ್ಡ ಪರಮಾಣು ಶಕ್ತಿ ಕೇಂದ್ರವು ಇದ್ದು, ಅದು ವಿನಾಶಕ ಆಗಬಹುದು ಎಂದು ಅಮೆರಿಕ ಮತ್ತು ವಿಶ್ವ ಸಂಸ್ಥೆಯ ತಜ್ಞರು ಎಚ್ಚರಿಸಿದ್ದಾರೆ. ಅದು ಸ್ಫೋಟಿಸಿದರೂ ರೇಡಿಯೇಶನ್ ಅಪಾಯ ಯೂರೋಪನ್ನು ಕಾಡಲಿದೆ.



Join Whatsapp