ಭ್ರಷ್ಟಾಚಾರ ಆರೋಪ: ಪಂಜಾಬ್ ಸಚಿವ ರಾಜೀನಾಮೆ

Prasthutha|

ಚಂಡೀಗಡ: ಪಂಜಾಬ್ ತೋಟಗಾರಿಕಾ ಸಚಿವ ಫೌಜಾ ಸಿಂಗ್ ಸರಾರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -


ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಸಲ್ಲಿಸಿದ್ದಾರೆ. ಪತ್ರದಲ್ಲಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ.


ಯೋಜನೆಯೊಂದರಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅವರು ತಮ್ಮ ಆಪ್ತರು ಹಾಗೂ ಗುತ್ತಿಗೆದಾರರ ಬಳಿ ಮಾತನಾಡಿದ್ದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ವಿರೋಧ ಪಕ್ಷಗಳು ಫೌಜಾ ಸಿಂಗ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದ್ದವು.



Join Whatsapp