ಬೆಂಗಳೂರು: 30 ಅಡಿ ಎತ್ತರದ ಹೋರ್ಡಿಂಗ್ ಫ್ರೇಮ್(ಬ್ಯಾನರ್ ಕಟ್ಟುವ ಕಂಬ)ನಲ್ಲಿ ಸಿಲುಕಿದ್ದ ಪಕ್ಷಿಯನ್ನು ಟ್ರಾಫಿಕ್ ಪೊಲೀಸೊಬ್ಬರು ತನ್ನ ಪ್ರಾಣವನ್ನೇ ಲೆಕ್ಕಿಸದೆ ಕಾಪಾಡಿದ ಹೃದಯಸ್ಪರ್ಶಿ ಘಟನೆ ರಾಜಾಜಿ ನಗರದಲ್ಲಿ ನಡೆದಿದೆ.
ಹೋರ್ಡಿಂಗ್ ನ ಲೋಹದ ರಾಡ್ ಗಳ ನಡುವೆ ಸಿಲುಕಿಕೊಂಡಿದ್ದ ಪಕ್ಷಿಯನ್ನು ರಕ್ಷಿಸಲು ರಾಜಾಜಿನಗರದ ಟ್ರಾಫಿಕ್ ಪೊಲೀಸ್ ಸುರೇಶ್ 30 ಅಡಿ ಎತ್ತರದ ಹೋರ್ಡಿಂಗ್ ಫ್ರೇಮ್ ಅನ್ನು ಏರುತ್ತಿರುವುದನ್ನು ಕಾಣಬಹುದು. ಬಳಿಕ ಸಾವಿನ ದವಡೆಯಿಂದ ಪಕ್ಷಿಯನ್ನು ತಪ್ಪಿಸಿ ಬಾನೆತ್ತರಕ್ಕೆ ಹಾರಲು ಬಿಟ್ಟಿದ್ದಾರೆ.
ಸುರೇಶ್ ಅವರ ದಯೆ, ಧೈರ್ಯ ಮತ್ತು ಮಾನವೀಯತೆ ತುಂಬಿದ ಕೆಲಸದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.