ಸರ್ವೋಚ್ಚ ನ್ಯಾಯಾಲಯಕ್ಕೆ ತಮ್ಮ ಸಾಕು ಮಕ್ಕಳನ್ನು ಕರೆತಂದ ಸಿಜೆಐ ಚಂದ್ರಚೂಡ್

Prasthutha|

ನವದೆಹಲಿ: ಸಿಜೆಐ ಡಿ. ವೈ. ಚಂದ್ರಚೂಡ್ ಅವರು ತಮ್ಮ ಸಾಕು ಮಕ್ಕಳೊಂದಿಗೆ ಇಂದು ಸುಪ್ರೀಂ ಕೋರ್ಟಿಗೆ ಬಂದಾಗ ಹಿರಿಯ ವಕೀಲರು, ನ್ಯಾಯಮೂರ್ತಿಗಳು ಸೇರಿ ಎಲ್ಲರಿಗೂ ಅಚ್ಚರಿ.

- Advertisement -


ಅವರು ತಮ್ಮ ಸಾಕು ಮಕ್ಕಳಿಗೆ ಕೋರ್ಟ್ ರೂಂ ಮತ್ತು ಚೇಂಬರ್ ತೋರಿಸಿ ಪರಿಚಯ ಮಾಡಿಸಿದರು.
ಡಿಸೆಂಬರ್ 6ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸಿಜೆಐ ಕೋರ್ಟ್ ನೋಡಲು ಬಯಸಿದ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೋರ್ಟಿಗೆ ಬಂದರು. ಆದರೆ ಸಾರ್ವಜನಿಕ ಗ್ಯಾಲರಿಯಲ್ಲಿ ಅವರಿಗೆ ಏನೂ ಸ್ಪಷ್ಟನೆ ಸಿಗಲಿಲ್ಲ.


ಅದನ್ನು ಗಮನಿಸಿದ ಸಿಜೆಐ ಅವರು ಮಗಳಂದಿರನ್ನು ಕೋರ್ಟ್ ರೂಮ್ ನಂಬರ್ 1ಕ್ಕೆ ಕರೆದೊಯ್ದರು. ಅಲ್ಲಿ ಅವರು ಹೇಗೆ ನ್ಯಾಯಾಲಯದ ಕಲಾಪ ನಡೆಯುತ್ತದೆ ಎಂಬುದನ್ನು ಅವರಿಗೆ ವಿವರಿಸಿದರು. 16ರ ಹರೆಯದ ಮಹಿ ಮತ್ತು 20ರ ಹರೆಯದ ಪ್ರಿಯಾಂಕರಿಗೆ ಚಂದ್ರಚೂಡ್ ಅವರು ಜಸ್ಟಿಸ್ ಕುಳಿತುಕೊಳ್ಳುವುದು, ವಕೀಲರ ವಾದ ವಿವಾದಗಳನ್ನು ವಿವರಿಸಿದರು.

- Advertisement -


ಅನಂತರ ಸಿಜೆಐ ಮಗಳಂದಿರನ್ನು ತನ್ನ ಚೇಂಬರಿಗೆ ಕರೆದುಕೊಂಡು ಹೋಗಿ ಮುಖ್ಯನ್ಯಾಯಮೂರ್ತಿಯವರ ಕಚೇರಿಯ ಪರಿಚಯ ಮಾಡಿಸಿದರು.
ಕೆಲವು ದಿನಗಳಿಂದ ಮಗಳಂದಿರು ತಮ್ಮ ಸಾಕು ತಂದೆಯು ಮುಖ್ಯ ನ್ಯಾಯಾಧೀಶರಾಗಿರುವ ಸರ್ವೋಚ್ಚ ನ್ಯಾಯಾಲಯವನ್ನು ನೇರ ನೋಡುವ ಅಪೇಕ್ಷೆಯನ್ನು ವ್ಯಕ್ತ ಪಡಿಸಿದ್ದರಂತೆ.
ಹಾಗಾಗಿ ಅವರು ಮಗಳಂದಿರನ್ನು ಕರೆತಂದಿದ್ದರು ಎಂದು ಸುಪ್ರೀಂಕೋರ್ಟ್ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.



Join Whatsapp