ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರಕಾರವು ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಕೋಳಿ ಖಾದ್ಯ ಮತ್ತು ಹಣ್ಣು ಹಂಪಲು ನೀಡಲು ತೀರ್ಮಾನ ತೆಗೆದುಕೊಂಡಿದೆ. ಕೂಡಲೆ ಜಾರಿಗೆ ತರಲು ಅದಕ್ಕೆ ಹಣ ಬಿಡುಗಡೆಯನ್ನು ಕೂಡ ತೃಣಮೂಲ ಕಾಂಗ್ರೆಸ್ ಮಾಡಿದೆ.
ಯಾವ ಯಾವ ಕಾಲದಲ್ಲಿ ಯಾವ ಹಣ್ಣು ಹೆಚ್ಚು ಸಿಗುವುದೋ ಆ ಹಣ್ಣು ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಬಿಜೆಪಿ ಇದನ್ನು ಟೀಕಿಸಿದೆ. ಮುಂದಿನ ಗ್ರಾಮ ಪಂಚಾಯತಿ ಚುನಾವಣೆ ಹಾಗೂ ಅನಂತರದ ಲೋಕಸಭಾ ಚುನಾವಣೆ ಗುರಿಯಿಟ್ಟುಕೊಂಡು ಟಿಎಂಸಿ ಕೋಳಿ ಹಣ್ಣು ಜಾರಿಗೆ ತಂದಿದೆ ಎಂದು ಬಿಜೆಪಿ ಆಪಾದಿಸಿದೆ.