ಅಮ್ರೋಹಾ: ಮಹಿಳೆಯ ಆಪರೇಶನ್ ನಡೆಸಿದ ವೈದ್ಯರೊಬ್ಬರು ಆಕೆಯ ಹೊಟ್ಟೆಯೊಳಗೆ ಟವೆಲ್ ಮರೆತು ಬಿಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹಾದ ಬನ್ಸ್ ಖೇರಿ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ರಾಜೀವ್ ಸಿಂಘಾಲ್ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಟವೆಲ್ ನಜ್ರಾನಾ ಅವರ ಹೊಟ್ಟೆಯೊಳಗೆ ಉಳಿದಿದೆ. ಮಹಿಳೆ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ ನಂತರ, ಅವರು ಅವಳನ್ನು ಇನ್ನೂ ಐದು ದಿನಗಳವರೆಗೆ ಅಡ್ಮಿಟ್ ಮಾಡಿದರು. ಹೀಗೆ ಯಾಕೆ ಅಡ್ಮಿಟ್ ಮಾಡಿದ್ದೀರಿ ಎಂದು ಕೇಳಿದಾಗ ಹೊರಗಿನ ಚಳಿಯಿಂದ ಆಕೆಗೆ ಹೊಟ್ಟೆ ನೋವು ಆಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ ಎನ್ನಲಾಗಿದೆ. ಮನೆಗೆ ಬಂದರೂ ಆರೋಗ್ಯ ಸುಧಾರಿಸದೇ ಇದ್ದಾಗ ಪತಿ ಆಕೆಯನ್ನು ಅಮ್ರೋಹದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಹೊಟ್ಟೆ ನೋವಿನ ಹಿಂದಿನ ಸತ್ಯ ತಿಳಿಯಿತು. ನಂತರ ಮತ್ತೊಂದು ಆಪರೇಷನ್ ಮಾಡಿ ಟವೆಲ್ ಹೊರತೆಗೆಯಲಾಯಿತು.