ನವದೆಹಲಿ: ಒಮಿಕ್ರಾನ್ ಮತ್ತು ಅದರ ಉಪತಳಿ ‘ಎಕ್ಸ್ ಬಿಬಿ’ ಭಾರತದಲ್ಲಿ ಪ್ರಬಲವಾದ ರೂಪಾಂತರಗಳೆನಿಸಿಕೊಂಡಿವೆ ಎಂದು ಭಾರತೀಯ ಸಾರ್ಸ್ ಕೋವ್ – 2 ಜಿನೋಮ್ ಒಕ್ಕೂಟ (ಐಎನ್ಎಸ್ಎಸಿಒಜಿ) ಸೋಮವಾರ ಬಿಡುಗಡೆಗೊಳಿಸಿದ ತನ್ನ ಬುಲೆಟಿನ್ ನಲ್ಲಿ ತಿಳಿಸಿದೆ.
ಒಮಿಕ್ರಾನ್ ಮತ್ತು ಅದರ ಉಪತಳಿಗಳು ಭಾರತದಲ್ಲಿ ಪ್ರಬಲವಾದ ರೂಪಾಂತರವಾಗಿ ಮುಂದುವರೆದಿವೆ. ಎಕ್ಸ್ಬಿಬಿ ಅತ್ಯಂತ ವೇಗವಾಗಿ (ಶೇ 63.2) ಪ್ರಸರಣೆಯಾಗುವ ಉಪ-ವಂಶಾವಳಿಯಾಗಿ ಭಾರತದಲ್ಲಿ ಕಾಣಿಸಿಕೊಂಡಿದೆ.
ಬುಲೆಟಿನ್ ಪ್ರಕಾರ ದೇಶದಲ್ಲಿ ಬಿಎ.2.75 ಮತ್ತು ಬಿಎ.2.10 ಇನ್ನೂ ಪ್ರಚಲಿತದಲ್ಲಿದ್ದು, ಅದರ ತೀವ್ರತೆ ಕಡಿಮೆ ಇದೆ. ಈಶಾನ್ಯ ಭಾರತದಲ್ಲಿ, ಬಿಎ.2.75 ಪ್ರಚಲಿತದಲ್ಲಿದ್ದರೂ, ಸದ್ಯ ರೋಗದ ತೀವ್ರತೆ ಅಥವಾ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಲಿಲ್ಲ.
ಓಮೈಕ್ರಾನ್ ಮತ್ತು ಅದರ ಉಪ-ತಳಿಗಳು ಭಾರತದಲ್ಲಿ ಪ್ರಬಲವಾದ ರೂಪಾಂತರವಾಗಿ ಮುಂದುವರೆದಿವೆ ಎಂದು ನವೆಂಬರ್ 28ರ ಬುಲೆಟಿನ್ಲ್ಲಿ ಹೇಳಲಾಗಿತ್ತು. ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರ ವಹಿಸಿದೆ.