ಧಾರವಾಡ: ಹಾವಿಗೆ ಶಸ್ತ್ರ ಚಿಕಿತ್ಸೆ ನಡೆಸಿರುವ ವಿಶೇಷ ಘಟನೆ ಧಾರವಾಡದಲ್ಲಿ ವರದಿಯಾಗಿದೆ.
ಹಿರಿಯ ಪ್ರಾಣಿ ವೈದ್ಯ ಡಾ. ಅನಿಲ್ ಕುಮಾರ ಪಾಟೀಲ್ ಅವರು ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕ್ಯಾನ್ಸರ್ ಕಾರಕ ಗೆಡ್ಡೆಯನ್ನು ಹೊರತೆಗೆಯಲಾಗಿದೆ.
ಉರಗ ರಕ್ಷಕ ಸೋಮಶೇಖರ್ ಚೆನ್ನಶೆಟ್ಟಿ ಅವರು ಹಾವೊಂದನ್ನು ರಕ್ಷಿಸಿದ್ದು, ಗೆಡ್ಡೆ ಪತ್ತೆಯಾದ ಹಿನ್ನೆಲೆಯಲ್ಲಿ ಅದನ್ನು ವೈದ್ಯರ ಬಳಿ ಕರೆತಂದಿದ್ದರು. ವೈದ್ಯರು ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲು ಸೂಚಿಸಿದ್ದರು.
ಹಾವಿಗೆ ತಲೆ ಹಾಗು ಕಣ್ಣಿನ ಭಾಗದಲ್ಲಿ ಗೆಡ್ಡೆ ಬೆಳವಣಿಗೆಯಾಗಿತ್ತು. ಇದು ಅತ್ಯಂತ ಅಪಾಯ ಹೊಂದಿದ್ದ ಶಸ್ತ್ರಚಿಕಿತ್ಸೆಯಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಹಾವನ್ನು ಸೋಮಶೇಖರ್ ಅವರ ಬಳಿಯೇ ಇಟ್ಟುಕೊಂಡು ಆರೈಕೆ ಮಾಡಲು ತಿಳಿಸಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.