ಇ-ತ್ಯಾಜ್ಯ ಸಂಸ್ಕರಣೆಗೆ ಹಲವು ಕ್ರಮ: ಸಚಿವ ಆನಂದ್ ಸಿಂಗ್

Prasthutha|

ಬೆಳಗಾವಿ: ಪರಿಸರಕ್ಕೆ ಮಾರಕವಾಗಿರುವ ಇ-ತ್ಯಾಜ್ಯದ ಸಂಸ್ಕರಣೆಗೆ ಸರ್ಕಾರದಿಂದ ಹಲವು ಕ್ರಮಕೈಗೊಳ್ಳಲಾಗಿದ್ದು,
180 ಇ-ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಘಟಕಗಳು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದುಕೊಂಡಿವೆ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

- Advertisement -

ಮೇಲ್ಮನೆಯಲ್ಲಿ ಜೆಡಿಎಸ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಸಚಿವರು, 180 ಇ-ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಘಟಕಗಳ ಪೈಕಿ 93 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 47 ಘಟಕಗಳು ಸ್ಥಾಪನಾ ಹಂತದಲ್ಲಿದ್ದು, 40 ಘಟಕಗಳು ಮುಚ್ಚಿವೆ ಎಂದರು.

ಹೊಸ ಕೈಗಾರಿಕಾ ನೀತಿ ಅನ್ವಯ ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಪುನರ್ ಬಳಕೆ ಯಂತ್ರೋಪಕರಣಗಳನ್ನು ಅಳವಡಿಸುವ/ಸ್ಥಾಪಿಸುವ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ.

- Advertisement -

ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ 43.64 ಲಕ್ಷ ಟನ್, 2019-20ರಲ್ಲಿ 44.74 ಲಕ್ಷ ಟನ್ ಹಾಊ 2020-21ನೇ ಸಾಲಿನಲ್ಲಿ 40-46 ಲಕ್ಷ ಟನ್ ತ್ಯಾಜ್ಯ ಉತ್ಪಾದನೆಯಾಗಿದೆ. ಅಸಂಘಟಿತ ಸಂಸ್ಕರಣಾ ಘಟಕಗಳಿಂದ ಸಂಗ್ರಹಿಸುತ್ತಿರುವ ಇ-ತ್ಯಾಜ್ಯದ ಪ್ರಮಾಣ ಲಭ್ಯವಿರುವುದಿಲ್ಲ ಎಂದು ಸಚಿವರು ವಿವರಿಸಿದರು.



Join Whatsapp