►500ಕ್ಕೂ ಹೆಚ್ಚು ಜಾತಿಯ ಮೀನುಗಳನ್ನು ಹೊಂದಿರುವ ಅತಿದೊಡ್ಡ ಅಂತರ್ಜಲ ಸುರಂಗ
ಬೆಂಗಳೂರು: ಅತಿದೊಡ್ಡ ಅಕ್ವೇರಿಯಂ ಹೊಂದಿರುವ ಬೆಂಗಳೂರು ಅತಿದೊಡ್ಡ ಅಂತರ್ಜಲ ಸುರಂಗ ಪ್ರದರ್ಶನಕ್ಕೆ ಸಜ್ಜಾಗಿದೆ. 500ಕ್ಕೂ ಹೆಚ್ಚು ಪ್ರಬೇಧಗಳ ಮೀನುಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. 20,000 ಚದರಡಿಗೂ ಅಧಿಕ ವಿಸ್ತೀರ್ಣದಲ್ಲಿ ಅಂತರ್ಜಲ ಸುರಂಗದ ಸಿಹಿನೀರು ಮತ್ತು ಉಪ್ಪು ನೀರು ಎರಡರಲ್ಲಿಯೂ ವಿಶೇಷ ಪ್ರಬೇಧದ ಮೀನುಗಳನ್ನು ನೋಡಬಹುದು. ಈ ಪ್ರದರ್ಶನ ಡಿಸೆಂಬರ್ 28 ರಿಂದ ಫೆಬ್ರವರಿ 2, 2023 ರವರೆಗೆ ಏರ್ಪಡಲಿದೆ.
ರಾಷ್ಟ್ರೀಯ ಗ್ರಾಹಕರ ಮೇಳದ ಬೆಂಬಲದ ಅಡಿಯಲ್ಲಿ ಈ ಪ್ರದರ್ಶನ ಏರ್ಪಡಲಿದ್ದು, ವಿಶೇಷ ಮೀನುಗಳಾದ ಏಂಜೆಲ್ ಫಿಶ್, ಕೋಯಿ, ಸ್ಕಾರ್ಪಿಯನ್ ಫಿಶ್, ಕ್ಲೌನ್ ಫಿಶ್, ಸಮುದ್ರ ಕುದುರೆಗಳು, ಬಾಕ್ ಪಿಶ್, ಕೌಫಿಶ್, ಈಲ್ಸ್, ವ್ರಾಸ್’ಗಳು, ಮಹ್ಸೀರ್ ಮತ್ತು ಸಾಮಾನ್ಯ ಸಮುದ್ರ ಜೀವಿಗಳನ್ನು ನೋಡಬಹುದು.
ಸಾಗರ ಜೀವಿಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ಸಹ ಪ್ರದರ್ಶನದಲ್ಲಿ ವಿಶೇಷವಾಗಿ ತೋರಿಸಲಾಗುತ್ತದೆ. ಭೂಮಿಯ ಜಲಚರಗಳ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ. ಇವು ಮಾನವನ ಆರ್ಥಿಕತೆ ಮತ್ತು ಆರೋಗ್ಯಕ್ಕೆ ಎಷ್ಟು ಅವಶ್ಯಕವಾಗಿದೆ ಎಂಬುದನ್ನು ಸಹ ತಿಳಿಸಿಕೊಡುತ್ತವೆ.
ಇದು 24 ಕೋಣೆಗಳೊಂದಿಗೆ ಅತಿದೊಡ್ಡ ಅಂತರ್ಜಲ ಅಕ್ವೇರಿಯಂ ಆಗಿದೆ. ಇದರಲ್ಲಿ ಒಂಬತ್ತು ಮಧ್ಯಮ ಗಾತ್ರದ, ಹದಿಮೂರು ಸಣ್ಣ ಗುಹೆಗಳು ಮತ್ತು ಎರಡು ದೊಡ್ಡ ಗುಹೆಗಳನ್ನು ಒಳಗೊಂಡಿದ್ದು, ಸಿಹಿನೀರು ಮತ್ತು ಸಮುದ್ರ ಮೀನುಗಳನ್ನು ಹೊಂದಿರುತ್ತವೆ. ಎಲ್ಲವನ್ನೂ ವಿಶಿಷ್ಟವಾದ ತೊಟ್ಟಿಗಳಲ್ಲಿ ಇರಿಸಲಾಗುತ್ತಿದ್ದು, ಪ್ರತಿಯೊಂದೂ ಸ್ವಂತ ಪರಿಸರ ವಿಜ್ಞಾನವನ್ನು ಹೊಂದಿವೆ.
ನಗರದಲ್ಲಿ ಎರಡು ಕಡೆ ನಡೆಯುತ್ತಿರುವ ಪ್ರದರ್ಶನದ ಸ್ಥಳ ಈ ಕೆಳಕಂಡಂತಿದೆ. ಕೆಂಗೇರಿ ಮೆಟ್ರೋ ನಿಲ್ದಾಣದ ಹತ್ತಿರ, ಕೆಂಗೇರಿ ಸಾಟಲೈಟ್ ಬಸ್ ಸ್ಟ್ಯಾಂಡ್, ಮೈಸೂರು ರಸ್ತೆ ಹಾಗೂ ಜಂಬೂಸವಾರಿ ದಿನ್ನೆ ಮುಖ್ಯ ರಸ್ತೆ, ಜೆಪಿ ನಗರ 8 ನೇ ಹಂತದಲ್ಲಿ ನಡೆಯುತ್ತಿದ್ದು ವಿಶೇಷ ಪ್ರಬೇಧಗಳ ಮೀನುಗಳ ಪ್ರದರ್ಶನಗಳನ್ನು ವೀಕ್ಷಿಸಲು ಸಿದ್ಧರಾಗಿ. ಸಮಯ ಸಂಜೆ 4 ರಿಂದ ರಾತ್ರಿ 9 ರವರೆಗೆ 28 ಡಿಸೆಂಬರ್ ರಿಂದ 2 ಫೆಬ್ರವರಿ, 2023 ರವರೆಗೆ ನಡೆಯಲಿದೆ.