ರಾಜ್ಯದ 44 ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆ ಖಾಲಿ| ಯಾವ ಇಲಾಖೆಯಲ್ಲಿ? ಎಷ್ಟು ಹುದ್ದೆಗಳು?

Prasthutha|

ರಾಜ್ಯ ಸರ್ಕಾರದಲ್ಲಿ ಜನಪರ ಸೇವೆಗೆ ಅಗತ್ಯ ಇರುವ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕಂದಾಯ, ಗೃಹ ಇಲಾಖೆಗಳಲ್ಲೇ ಅವಶ್ಯಕ ಹುದ್ದೆಗಳನ್ನು ಭರ್ತಿ ಮಾಡಿಲ್ಲ.  ರಾಜ್ಯದ ವಿವಿಧ 44 ಇಲಾಖೆಗಳಲ್ಲಿ 7.70 ಲಕ್ಷ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5.11 ಲಕ್ಷ ಹುದ್ದೆಗಳು ಭರ್ತಿ ಆಗಿದ್ದು, 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.

- Advertisement -

ರಾಜ್ಯದ ಒಟ್ಟು 44 ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇರುವ ಬಗ್ಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಸಾರ್ವಜನಿಕರಿಗೆ ಪ್ರಮುಖ ಸೇವೆಗಳನ್ನು ಒದಗಿಸುವ ಕಂದಾಯ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿಯೇ ಹುದ್ದೆಗಳು ಖಾಲಿ ಇರುವುದು ಬಯಲಾಗಿದೆ.

ಮುಖ್ಯವಾಗಿ ಸರಕಾರದ ವಿವಿಧ ಇಲಾಖೆಗಳಲ್ಲಿ ಸಿ ಮತ್ತು ಡಿ ಗ್ರೂಪ್‌ 82 ಸಾವಿರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ಕಳೆದ ಐದು ವರ್ಷಗಳಲ್ಲಿ ನೇಮಕಾತಿ ನಡೆಸಿದ್ದು 20 ಸಾವಿರ ಹುದ್ದೆಗಳಿಗೆ ಮಾತ್ರ. ಕೃಷಿ, ಶಿಕ್ಷಣ, ಆರ್ಥಿಕ, ಎಸ್ಸಿ-ಎಸ್ಟಿ, ಒಬಿಸಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲಾಭಿವೃದ್ಧಿ ಇಲಾಖೆಗಳಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ.

- Advertisement -

ಇಲಾಖೆಗಳು  ಮತ್ತು ಖಾಲಿ ಇರುವ ಹುದ್ದೆಗಳು                                                                                              

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ- 66,059

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ- 34,644

ಆಹಾರ ಮತ್ತು ನಾಗರಿಕ ಸರಬರಾಜು- 1,187                        

ಆರ್ಥಿಕ- 8,799

ಒಳಾಡಳಿತ- 23,557

ತೋಟಗಾರಿಕೆ- 3,092

ಕೃಷಿ ಇಲಾಖೆ- 6,316

ಉನ್ನತ ಶಿಕ್ಷಣ- 12,674

ಪಶುಸಂಗೋಪನೆ ಇಲಾಖೆ- 9,972

ಹಿಂದುಳಿದ ವರ್ಗಗಳ ಕಲ್ಯಾಣ- 8,069           

ಪರಿಶಿಷ್ಟ ಜಾತಿಗಳ ಕಲ್ಯಾಣ- 9,592

ಪರಿಶಿಷ್ಟ ಪಂಗಡಗಳ ಕಲ್ಯಾಣ- 2,318                           

ಕಾನೂನು ಇಲಾಖೆ- 8,370

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌- 10,409

ಮಹಿಳಾ ಮತ್ತು ಮಕ್ಕಳ ಕಲ್ಯಾಣ- 3,230                             

ಕಾನೂನು ಇಲಾಖೆ- 8,370

ಕೌಶಲಾಭಿವೃದ್ಧಿ ಇಲಾಖೆ- 4,216

ಕರ್ನಾಟಕ ಲೋಕಸೇವಾ ಆಯೋಗ ಒದಗಿಸಿರುವ ಮಾಹಿತಿಯಂತೆ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ ಐದು ವರ್ಷಗಳಲ್ಲಿ ಒಟ್ಟು 20,747 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ತ್ವರಿತ ಕ್ರಮಗಳನ್ನು ಕೆಪಿಎಸ್‌ಸಿ ಕೈಗೊಳ್ಳುತ್ತಿದೆ. ಅದರಂತೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳು, ಎಸ್‌ಡಿಎ, ಗ್ರೂಪ್‌ ಸಿ, ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್‌, ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.



Join Whatsapp