ಬಾಂಗ್ಲಾದೇಶ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ನಲ್ಲಿ ಭಾರತ, ಮೂರು ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ 2-0 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ರಾಹುಲ್ ಬಳಗ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ಗೆಲುವಿಗೆ 145 ರನ್ಗಳ ಸುಲಭ ಗುರಿ ಪಡೆದಿದ್ದ ಭಾರತ, 3ನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟದಲ್ಲಿ 45 ರನ್ಗಳಿಸಿತ್ತು. 4ನೇ ದಿನ 74 ರನ್ ತಲುಪುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಆತಿಥೇಯ ಬಾಂಗ್ಲಾ ಪಾಳಯದಲ್ಲಿ ಗೆಲುವಿನ ಭರವಸೆ ಮೂಡಿತ್ತು. ಆದರೆ 9ನೇ ವಿಕೆಟ್ಗೆ 71 ರನ್ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದ ಶ್ರೇಯಸ್ ಅಯ್ಯರ್ (29) ಮತ್ತು ರವಿಚಂದ್ರನ್ ಅಶ್ವಿನ್ (42), ತಂಡವನ್ನು ರೋಚಕ ಗೆಲುವಿತ್ತ ಮುನ್ನಡೆಸಿದರು.
ಬಾಂಗ್ಲಾ ಗೆಲುವಿಗಾಗಿ ಹೋರಾಟವನ್ನು ಚಾಲ್ತಿಯಲ್ಲಿರಿಸಿದ್ದ ಸ್ಪಿನ್ನರ್, ಮೆಹಿದಿ ಹಸನ್ ಮಿರಾಜ್ 5 ವಿಕೆಟ್ ಪಡೆದರಾದರೂ, ಅಶ್ವಿನ್-ಅಯ್ಯರ್ ಜೋಡಿ ಎದುರು ಶರಣಾದರು. ಒಟ್ಟು 8 ವಿಕೆಟ್ ಮತ್ತು ನಿರ್ಣಾಯಕ 42 ರನ್ಗಳಿಸಿದ ಆರ್. ಆಶ್ವಿನ್ ಪಂದ್ಯ ಶ್ರೇಷ್ಠ ಮತ್ತು ಚೇತೇಶ್ವರ್ ಪೂಜಾರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 227 & 231 (ಲಿಟ್ಟನ್ ದಾಸ್ 73, ಜಾಕಿರ್ ಹಸನ್ 51; ಅಕ್ಷರ್ ಪಟೇಲ್ 3/68).
ಭಾರತ: 314 ಮತ್ತು 145/7 (ರವಿಚಂದ್ರನ್ ಅಶ್ವಿನ್ 42, ಅಕ್ಷರ್ ಪಟೇಲ್ 26, ಶ್ರೇಯಸ್ ಅಯ್ಯರ್ 29; ಮೆಹಿದಿ ಹಸನ್ ಮಿರಾಜ್ 5/63).