ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ, ಪರಿಸ್ಥಿತಿ ನೋಡಿ ನಿರ್ಧಾರ: ಸಚಿವ ಡಾ.ಸುಧಾಕರ್

Prasthutha|

ಬೆಂಗಳೂರು: ಮಾಸ್ಕ್ ಕಡ್ಡಾಯವಿಲ್ಲ, ಪರಿಸ್ಥಿತಿ ನೋಡಿ ಮುಂದೆ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

- Advertisement -


ಈ ಬಗ್ಗೆ ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುತ್ತೇವೆ. ಸದ್ಯಕ್ಕೆ ಕಡ್ಡಾಯ ಮಾಡಿಲ್ಲ, ಮಾಸ್ಕ್ ಹಾಕುವಂತೆ ಸಲಹೆ ಕೊಟ್ಟಿದ್ದೇವೆ. ಪ್ರಧಾನಿ ಮೋದಿ, ಸಚಿವರು, ಸಂಸತ್ ಅಧಿವೇಶನದಲ್ಲಿ ಮಾಸ್ಕ್ ಹಾಕಿ ಆದರ್ಶ ಮೆರೆದಿದ್ದಾರೆ. ಇಡೀ ದೇಶ ಅವರನ್ನು ಪಾಲನೆ ಮಾಡಬೇಕು ಎಂದರು.


ಲಕ್ಷಾಂತರ ಡೋಸ್ ವೇಸ್ಟ್ ಆಗಿರುವ ಬಗ್ಗೆ ಗೊತ್ತಿಲ್ಲ. ಸ್ವಲ್ಪ ಮಟ್ಟಿಗೆ ಲಸಿಕೆ ವೇಸ್ಟ್ ಆಗಿದೆ. ಕೋವಿಡ್ ಹೋಗಿದೆ ಎಂಬ ಮನಸ್ಥಿತಿಯಲ್ಲಿ ಜನರು ಇದ್ದಾರೆ. ಇವಾಗ ಚೀನಾ ಮತ್ತು ಕೆಲವು ದೇಶಗಳ ಪರಿಸ್ಥಿತಿ ನೋಡಿ ಮತ್ತೆ ಜನರು ಆಸಕ್ತಿಯಿಂದ ಲಸಿಕೆ ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.



Join Whatsapp