ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು; ಕಾರಣ ನಿಗೂಢ

Prasthutha|

ಚಿಕ್ಕಮಗಳೂರು: ಪ್ರೇಮಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಆಲ್ದೂರು ಸಮೀಪದ ಸತ್ತಿಹಳ್ಳಿ ಬಳಿ ನಡೆದಿದೆ.

- Advertisement -

ಚಿಕ್ಕಮಗಳೂರು ತಾಲೂಕಿನ ಕಲ್ಲುಗುಡ್ಡೆ ಅಣೂರಿನ ದರ್ಶನ್ ಹಾಗೂ, ಹಾಸನ ಜಿಲ್ಲೆಯ ಹಾನಬಾಳು ಮೂಲದ ಪೂರ್ವಿಕಾ ಎಂದು ಗುರುತಿಸಲಾಗಿದೆ. ಒಂದೇ ವೇಲ್ ನಲ್ಲಿ ಯುವಕ-ಯುವತಿ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಲ್ದೂರು ಸಮೀಪದ ಗುಲ್ಲನಪೇಟೆಯ ಸತ್ತಿಹಳ್ಳಿ ನಿರ್ಜನ ಪ್ರದೇಶದಲ್ಲಿ ಘಟನೆ‌‌ ನಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣವಿನ್ನೂ ತಿಳಿದು ಬಂದಿಲ್ಲ.

- Advertisement -

ಸ್ಥಳಕ್ಕೆ ಭೇಟಿನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.



Join Whatsapp