ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣ| ಹೈಕೋರ್ಟ್​ ಷರತ್ತು ಉಲ್ಲಂಘಿಸಿದ ಆರ್‌ಡಿ ಪಾಟೀಲ್‌ಗೆ ಸಿಐಡಿ ನೋಟಿಸ್

Prasthutha|

ಕಲಬುರಗಿ‌: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಕಿಂಗ್‌ಪಿನ್ ಆರ್ ಡಿ ಪಾಟೀಲ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾಮೀನು ನೀಡುವಾಗ ಹೈಕೋರ್ಟ್ ವಿಧಿಸಿದ ಷರತ್ತುಗಳನ್ನು ಆರ್‌ಡಿ ಪಾಟೀಲ್ ಉಲ್ಲಂಘಿಸಿದ್ದು, ಸಿಐಡಿ ಅಧಿಕಾರಿಗಳು ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

- Advertisement -

ಕಳೆದ ಶನಿವಾರ ಆರ್ ಡಿ ಪಾಟೀಲ್‌ಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿ ಬಿಡುಗಡೆ ಮಾಡಿತ್ತು. ಷರತ್ತಿನ ಅನ್ವಯ ಜಿಲ್ಲೆಯ ಟ್ರಯಲ್ ಕೋರ್ಟ್(ಜಿಲ್ಲಾ ಕೆಂದ್ರ) ಬಿಟ್ಟು ಹೊರ ಹೋಗಬಾರದು. ಜಾಮೀನಿನಲ್ಲಿ ಸೂಚಿರುವ ಅಡ್ರೆಸ್ ನಲ್ಲೆ ಇರಬೇಕು. ತನಿಖಾಧಿಕಾರಿಗಳಿಗೆ ನೀಡಿದ ಮೊಬೈಲ್ ಸಂಖ್ಯೆ ಬದಲಿಸದೆ ಸದಾ ಲಭ್ಯವಾಗಿರಬೇಕು. ಮೊಬೈಲ್ ನಂಬರ್ ಚೇಂಜ್ ಮಾಡಿದ್ರೆ ಅಥವಾ ಅಡ್ರೆಸ್ ಚೆಂಜ್ ಮಾಡುವುದಾದರೆ ತನಿಖಾಧಿಕಾರಿ ಮತ್ತು ಕೋರ್ಟ್ ಗಮನಕ್ಕೆ ತರಬೇಕು.‌ ಜಾಮೀನಿನ ಮೇಲೆ ಹೊರ ಬಂದಾಗ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಬಾರದು ಹೀಗೆ ಅನೇಕ ಷರತ್ತುಗಳನ್ನು ಹೈಕೊರ್ಟ್ ವಿಧಿಸಿತ್ತು.

ಆದ್ರೆ ನಿನ್ನೆ ತನಿಖಾಧಿಕಾರಿಗಳು ಆರ್‌ಡಿ ಪಾಟೀಲ್ ಮನೆಗೆ ಬಂದಾಗ ಮನೆ ಲಾಕ್ ಆಗಿತ್ತು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಆರ್ ಡಿ ಪಾಟೀಲ್ ಸಹೋದರನನ್ನು ಸಂಪರ್ಕಿಸಿದಾಗ ಗಾಣಗಾಪುರ ದರ್ಶನಕ್ಕೆ ಹೋಗಿದ್ದಾರೆಂದು ಹೇಳಿದ್ದರು. ಹೀಗಾಗಿ ನಿನ್ನೆ ಸಾಯಂಕಾಲ ನಾಲ್ಕು ಗಂಟೆಗೆ ವಿಚಾರಣೆಗೆ ಹಾಜರಾಗಲು ತನಿಖಾಧಿಕಾರಿಗಳು ಸೂಚಿಸಿದ್ದರು. ಆದರೆ ತನಿಖಾಧಿಕಾರಿಯ ಮುಂದೆ ಆರ್ ಡಿ ಪಾಟೀಲ್ ಹಾಜರಾಗಿಲ್ಲದ ಕಾರಣ ಇಂದು ಅಧಿಕಾರಿಗಳು ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಇಂದು ಸಂಜೆಯಾಗುವ ವರೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇವತ್ತು ಕೂಡ ತನಿಖಾಧಿಕಾರಿಗಳ ಮುಂದೆ ಹಾಜರಾಗದಿದ್ದರೆ ಆರ್ ಡಿ ಪಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.



Join Whatsapp