ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರೇ, ‘ಸ್ನೇಹಿತರಿಗೆ’ ಡ್ರೈ ಫ್ರೂಟ್ಸ್ ತಿನ್ನಿಸುವುದನ್ನು ನಿಲ್ಲಿಸಿ, ಹಣದುಬ್ಬರದಿಂದ ಬಳಲುತ್ತಿರುವ ಜನರಿಗಾಗಿ ಕೆಲಸ ಮಾಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಕಿದ್ದಾರೆ.
ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಅನ್ನು ₹ 500ಕ್ಕೆ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಘೋಷಿಸಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರ ನೀಡುತ್ತಿರುವುದಕ್ಕಿಂತಲೂ ₹ 500 ಕಡಿಮೆ ಬೆಲೆಗೆ ಸಿಲಿಂಡರ್ ನೀಡುವ ದೊಡ್ಡ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ, ‘ಸ್ನೇಹಿತರಿಗೆ’ ಡ್ರೈ ಫ್ರೂಟ್ಸ್ ತಿನ್ನಿಸುವುದನ್ನು ನಿಲ್ಲಿಸಿ, ಹಣದುಬ್ಬರದಿಂದ ಬಳಲುತ್ತಿರುವ ಜನರಿಗಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ.
₹500 में गैस सिलेंडर देने का राजस्थान की कांग्रेस सरकार का बड़ा ऐलान – केंद्र सरकार की कीमतों के आधे से भी कम दाम में।
— Rahul Gandhi (@RahulGandhi) December 20, 2022
प्रधानमंत्री जी, ‘मित्रों' को मेवा खिलाना बंद कीजिए, महंगाई से त्रस्त जनता की सेवा कीजिए।