ಪ್ರಿಟೋರಿಯಾ: ಟ್ವಿಟರ್ನಲ್ಲಿ ಹೊಸ ಸಮೀಕ್ಷೆ ಆರಂಭಿಸಿರುವ ಎಲಾನ್ ಮಸ್ಕ್ ಟ್ವಿಟರ್ನ ಸಿಇಒ ಸ್ಥಾನದಿಂದ ನಾನು ಕೆಳಗಿಳಿಯಬೇಕೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಯೊಂದನ್ನು ಹರಿಯಬಿಟ್ಟಿದ್ದು, ಜನರು ನೀಡುವ ಉತ್ತರಕ್ಕೆ ತಾವು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ.
‘ಟೆಸ್ಲಾ ಅಥವಾ ಟ್ವಿಟರ್ ಆಗಿರಲಿ… ಯಾವುದೇ ಕಂಪನಿಯ ಸಿಇಒ ಆಗಿರಲು ನಾನು ಬಯಸುವುದಿಲ್ಲ’ ಎಂದು ಮಸ್ಕ್ ಕಳೆದ ತಿಂಗಳು ಹೇಳಿದ್ದರು.
ಇದೀಗ ಟ್ವಿಟರ್ನ ಸಾವಿರಾರು ಬಳಕೆದಾರರು ಮಸ್ಕ್ ಅವರ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದು, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಎಲಾನ್ ಮಸ್ಕ್ ಆರಂಭಿಸಿರುವ ಸಮೀಕ್ಷೆಯಲ್ಲಿ ಸೋಮವಾರ ಬೆಳಗ್ಗೆ 10.30ರ ಹೊತ್ತಿಗೆ ಶೇ. 53ರಕ್ಕೂ ಅಧಿಕ ಮಂದಿ, ನೀವು ಸಿಇಒ ಸ್ಥಾನದಿಂದ ಕೆಳಗಿಳಿಯಬೇಕು ಎಂದೇ ಉತ್ತರಿಸಿದ್ದಾರೆ.