ಬೋವಿ ಸಮುದಾಯ ಎಸ್.ಸಿ. ಮೀಸಲಾತಿಯಿಂದ ಹೊರಬರಲಿ: ಜೈ ಮಾದಿಗ ವೇದಿಕೆ ಆಗ್ರಹ

Prasthutha|

ಬೆಂಗಳೂರು: ಜೈ ಮಾದಿಗರ ಬೌದ್ಧಿಕ ವೇದಿಕೆ ವತಿಯಿಂದ ವಿಶ್ವ ಮಾದಿಗ ದಿನಾಚರಣೆಯನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಂಬೇಡ್ಕರ್ ಭಾವಚಿತ್ರ ಪುಷ್ಪ ನಮನ ಸಲ್ಲಿಸಲಾಯಿತು.

- Advertisement -

ಅಖಿಲ ಭಾರತ ಜೈ ಮಾದಿಗ ರಾಷ್ಟ್ರೀಯ ಸಮಿತಿ ರಾಜ್ಯಾಧ್ಯಕ್ಷ ಬಿ.ಆರ್.ಮುನಿರಾಜು ಮಾತನಾಡಿ, ಮಾದಿಗ ದಿನಾಚರಣೆಯು ಆಂಧ್ರಪ್ರದೇಶದ ಎಲ್ಲೂರು ಜಿಲ್ಲೆಯ  ಪೋಲಾವರಂ ವಿಧಾನಸಭಾ ಕ್ಷೇತ್ರದ ಕುಕುಮರ್ ಮಂಡಲ್ ನ ಗಾನಪವರಮ್ ನಲ್ಲಿ ನಡೆಯಲಿದ್ದು ರಾಜ್ಯದಿಂದ ಮೂರು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲೂ ಡಿಸೆಂಬರ್ 29ರಂದು ಮಾದಿಗ ದಿನಾಚರಣೆಯನ್ನು ಆಚರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೋವಿ, ಕೊರಚ, ಕೊರಮ ಸಮುದಾಯಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದ್ದರೆ  ಎಸ್.ಸಿ. ಪ್ರವರ್ಗದಿಂದ ಹೊರಬರಬೇಕು. ಎಸ್.ಸಿ.ಕೋಟಾದಲ್ಲಿ ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ.  ಬೋವಿ ಸಮುದಾಯದ ಸ್ವಾಮೀಜಿಗಳು ರಾಜಕಾರಣಿ ರೀತಿ ನಡೆದುಕೊಳ್ಳುತ್ತಿದ್ದಾರೆ. ಮೀಸಲಾತಿ ಕೋಟಾದಿಂದ ಹೊರಬಂದು ಬೇರೆ ಎಸ್.ಸಿ.ಸಮುದಾಯಕ್ಕೆ ಅವಕಾಶ ನೀಡಬೇಕೆಂದು ಹೇಳಿದರು.

- Advertisement -

ಆದಿ ಜಾಂಬವ ಸಮುದಾಯದ ಮುಖಂಡರಾದ ರಮೇಶ್ ಮಾತನಾಡಿ, ಮಾದಿಗ ಜಾತಿ ಒಂದು ಹೆಸರಿನಲ್ಲಿ ಹೋಗುತ್ತಿದ್ದೇವೆ. ನಾವು ಚರ್ಮದ್ಯೋಮವನ್ನು ನಂಬಿ ಬದುಕು ನಡೆಸುತ್ತಿದ್ದೇವೆ. ಆದ್ದರಿಂದ ಬೋವಿ ಸಮುದಾಯ ಮೀಸಲಾತಿಯಿಂದ ಹೊರಬರಬೇಕು. ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿ ತರಬೇಕು ಎಂದು ಆಗ್ರಹಿಸಿದರು.

ಜೈ ಮಾದಿಗ ವೇದಿಕೆ ಗೌರವಾಧ್ಯಕ್ಷ ಮುತ್ತುರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.



Join Whatsapp