ಬಂಟ್ವಾಳ | ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ಯುವಕ- ಯುವತಿಯನ್ನು ತಡೆದ ಬಜರಂಗದಳ ಕಾರ್ಯಕರ್ತರು

Prasthutha|

►ಯುವತಿಯಿಂದ ತರಾಟೆ, ಮುಜುಗರಕ್ಕೀಡಾದ ಸಂಘಪರಿವಾರ

- Advertisement -

ಬಂಟ್ವಾಳ: ಮುಸ್ಲಿಮ್ ಯುವಕನ ಜೊತೆಯಲ್ಲಿ ಯುವತಿಯೋರ್ವಳು ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಬಸ್ ತಡೆದು ಗೊಂದಲ ಸೃಷ್ಟಿಸಿದ ಘಟನೆ ಕಳೆದ ರಾತ್ರಿ ನಡೆದಿದೆ.


ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್’ನಲ್ಲಿ ಯುವಕನ ಪಕ್ಕದ ಸೀಟಿನಲ್ಲಿ ಯುವತಿಯೋರ್ವಳು ಕುಳಿತಿದ್ದಾಳೆ ಎಂಬ ಮಾಹಿತಿ ಪಡೆದ ಬಜರಂಗದಳದ ಗೂಂಡಾಗಳು ದಾಸಕೋಡಿ ಎಂಬಲ್ಲಿ ಬಸ್ ತಡೆದು ನಿಲ್ಲಿಸಿದ್ದಾರೆ. ಬಳಿಕ ಬಸ್’ನಲ್ಲಿ ಬಜರಂಗದಳ ಹಾಗೂ ಪ್ರಯಾಣಿಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸಂಘಪರಿವಾರದ ಕಾರ್ಯಕರ್ತರನ್ನು ಯುವತಿ ತರಾಟೆಗೆ ತೆಗೆದುಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -


ನಮ್ಮ ಪ್ರಯಾಣಕ್ಕೆ ಅಡ್ಡಬರಬೇಡಿ, ನಾವು ದುಡ್ಡು ಕೊಟ್ಟು ಪ್ರಯಾಣ ಮಾಡುತ್ತಿದ್ದೇವೆ, ಹುಚ್ಚುಚ್ಚಾಗಿ ಆಡಬೇಡಿ ಎಂದು ಯುವತಿ ಬಜರಂಗದಳದ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ವೀಡಿಯೋದಲ್ಲಿದೆ.


ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಬಜರಂಗದಳ ಕಾರ್ಯಕರ್ತರು ಹಾಗೂ ಯುವಕ-ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ ಬಳಿಕ ಬಳಿಕ ಅವರಿಬ್ಬರನ್ನೂ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.



Join Whatsapp