ದಕ್ಷಿಣ ಕನ್ನಡ| ಜಿಲ್ಲೆಯಲ್ಲಿ ದುಡಿಯುವ ವರ್ಗಕ್ಕೂ ಬಾಧಿಸಿದ ಅನೈತಿಕ ಗೂಂಡಾಗಿರಿ: SDTU ಕಳವಳ

Prasthutha|

►ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಭೇಟಿಯಾದ SDTU ಜಿಲ್ಲಾ ನಿಯೋಗ, ಕ್ರಮಕೈಗೊಳ್ಳಲು ಆಗ್ರಹ

- Advertisement -

ಮಂಗಳೂರು: ಬಸ್ಸಲ್ಲಿ ಸಂಚರಿಸುವ ವೇಳೆ ಸುಳ್ಳು ಆರೋಪ ಹೊರಿಸಿ ಕಾರ್ಮಿಕನೊಬ್ಬನನ್ನು ಅಪಹರಿಸಿ ಮರಕ್ಕೆ ಕಟ್ಟಿ ಹಾಕಿ  ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ಕುಕೃತ್ಯವನ್ನು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಮುಸ್ತಾಕ್ ತಲಪಾಡಿ ಖಂಡಿಸಿದ್ದಾರೆ

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು  ಕಾಣಿಯೂರು ಬಟ್ಟೆ ವ್ಯಾಪಾರಿಗಳ ಮೇಲೆ ನಡೆದ ಗುಂಪು ಹಲ್ಲೆ, ಮಂಗಳೂರು ಜುವೆಲ್ಲರಿ ಅಂಗಡಿಗೆ ನುಗ್ಗಿ ನಡೆಸಿದ ಹಲ್ಲೆ ಮಾಸುವ ಮುನ್ನವೇ ದುಷ್ಕರ್ಮಿಗಳು ಬಡಪಾಯಿ ಕಾರ್ಮಿಕನೋರ್ವನ ಮೇಲೆ ರಕ್ತ ಹೆಪ್ಪುಗಟ್ಟುವ ರೀತಿಯಲ್ಲಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ ಮತ್ತು ಅಕ್ಷಮ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಜಿಲ್ಲೆಯಲ್ಲಿ ಹಲ್ಲೆ ಗುಂಪು ಹಿಂಸೆ ಒಂದರ ಹಿಂದೆ ಒಂದರಂತೆ ಪುನರಾವರ್ತನೆಯಾಗುತ್ತಿದ್ದು ಪೋಲಿಸ್ ಇಲಾಖೆಯ ನಿರ್ಲಕ್ಷವೇ ಈ ಎಲ್ಲಾ ಘಟನೆಗೆ ಕಾರಣವಾಗಿದೆ. ಈ ಘಟನೆಯಲ್ಲೂ ಹಲ್ಲೆಗೊಳಗಾದ ವ್ಯಕ್ತಿಯನ್ನೇ ಬೆಳಿಗ್ಗೆಯಿಂದ ಸಂಜೆಯವರೆಗೆ ಪೊಲೀಸರು ಠಾಣೆಯಲ್ಲಿ ಕೂರಿಸಿ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದ್ದರಿಂದ ಪೋಲಿಸ್ ಉನ್ನತ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತು ಹಲ್ಲೆ ಮಾಡಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಬೇಕು ಮಾತ್ರವಲ್ಲ ರಕ್ಷಣೆ ನೀಡಬೇಕಾದ ಪೊಲೀಸರೇ ಹಲ್ಲೆಗೊಳಗಾದ ಗಾಯಳುವನ್ನು ಸಂಜೆಯವರೆಗೆ ಠಾಣೆಯಲ್ಲಿ ಕೂರಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂಬ ಆರೋಪವನ್ನು ತನಿಖೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಮೂಲರಪಟ್ನ ನಿವಾಸಿಯನ್ನು ಆಸ್ಪತ್ರೆಯಲ್ಲಿ SDTU ಜಿಲ್ಲಾ ನಿಯೋಗ ಭೇಟಿ ಮಾಡಿದೆ.

ನಿಯೋಗದಲ್ಲಿ SDTU ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಮುಸ್ತಾಕ್ ತಲಪಾಡಿ, ಫಿರೋಜ್ ಪಡುಬಿದ್ರೆ, ಇಲ್ಯಾಸ್ ಬೆಂಗರೆ, ಆಸೀಫ್, ಮನ್ಸೂರ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.



Join Whatsapp