ಆನ್’ಲೈನ್ ಮೂಲಕ ಆಸಿಡ್ ಖರೀದಿ: ಫ್ಲಿಪ್ ಕಾರ್ಟ್, ಅಮೆಜಾನ್’ಗಳಿಗೆ ನೋಟಿಸ್ ಜಾರಿ

Prasthutha|

ನವದೆಹಲಿ: ದೆಹಲಿಯಲ್ಲಿ ಶಾಲಾ ಬಾಲಕಿಯ ಮೇಲೆ ಆಸಿಡ್ ಎರಚಿದ ಆರೋಪಿಗಳು ಆನ್ ಲೈನ್ ಮೂಲಕ ಆಸಿಡ್ ಖರೀದಿಸಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ದೆಹಲಿ ಮಹಿಳಾ ಆಯೋಗವು ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್’ಗಳಿಗೆ ನೋಟಿಸ್ ಜಾರಿ ಮಾಡಿದೆ. 

- Advertisement -

ದಿಲ್ಲಿಯಲ್ಲಿ 17ರ ಶಾಲಾ ಬಾಲಕಿಯ ಮೇಲೆ ನಿನ್ನೆ ಆಸಿಡ್ ದಾಳಿ ನಡೆದಿತ್ತು. ಆ್ಯಸಿಡ್ ಮಾರಾಟಕ್ಕೆ ಸರ್ವೋಚ್ಚ ನ್ಯಾಯಾಲಯವೇ ನಿರ್ಬಂಧ ವಿಧಿಸಿದ್ದರೂ ಇಷ್ಟು ಸುಲಭವಾಗಿ ಆ್ಯಸಿಡ್ ಖರೀದಿ ಸಾಧ್ಯವೆಂಬುದು ಅಚ್ಚರಿ ತಂದಿದೆ ಎಂದು ಆಯೋಗ ಹೇಳಿದೆ.

ಡಿಸೆಂಬರ್ 14ರ ಬೆಳಿಗ್ಗೆ ನೈರುತ್ಯ ದಿಲ್ಲಿಯ ದ್ವಾರಕಾದಲ್ಲಿ 17ರ ಹರೆಯದ 12ನೇ ತರಗತಿಯ ಬಾಲಕಿ ಶಾಲೆಗೆ ಹೊರಟಿದ್ದಾಗ ಆಕೆಯ ಮೇಲೆ ಬೈಕಿನಲ್ಲಿ ಬಂದ ಇಬ್ಬರಲ್ಲಿ ಹಿಂದೆ ಕುಳಿತಿದ್ದವನು ಆಸಿಡ್ ಎರಚಿದ್ದ. ಸಿಸಿಟೀವಿ ವೀಡಿಯೋದಲ್ಲಿ ದಾಳಿಯ ಬೆನ್ನಿಗೇ ಬಾಲಕಿ ನೋವಿನಿಂದ ಮುದುಡಿ ಬಿದ್ದುದನ್ನು ಕಾಣಬಹುದು.

- Advertisement -

ಈ ಆಸಿಡ್ ದಾಳಿಯನ್ನು ಯೋಜಿಸಿದವನು 20ರ ಪ್ರಾಯದ ಸಚಿನ್ ಅರೋರಾ ಆ ಹುಡುಗಿಯ ಹಿಂದೆ ಬಿದ್ದು ಬೈಸಿಕೊಂಡಿದ್ದ. ಸಚಿನ್ ಗೆ ಇದರಲ್ಲಿ ನೆರವಾದವರು 19ರ ಹರ್ಷಿತ್ ಅಗರ್ವಾಲ್ ಮತ್ತು 22ರ ವೀರೇಂದರ್ ಸಿಂಗ್ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಇ ವ್ಯಾಲೆಟ್ ನಿಂದ ಪೇ ಮಾಡಿ ಫ್ಲಿಪ್ ಕಾರ್ಟ್ ಮೂಲಕ ಸಚಿನ್ ಅರೋರಾ, ಆನ್ ಲೈನ್’ನಲ್ಲಿ ಆಸಿಡ್ ತರಿಸಿಕೊಂಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರೀತ್ ಹೂಡ ಹೇಳಿದ್ದರು. ಆದರೆ ಇ- ಕಾಮರ್ಸ್ ಪೋರ್ಟಲ್ ಇಲ್ಲಿಯವರೆಗೆ ಆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

 ತರಕಾರಿ ಕೊಂಡಷ್ಟೇ ಸುಲಭದಲ್ಲಿ ಆಸಿಡ್ ಖರೀದಿಸಬಹುದು ಎನ್ನುವುದು ಆತ್ಮಘಾತಕ ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.



Join Whatsapp