ಲೋಕಸಭೆಯಲ್ಲಿ ಪ್ರತಿಧ್ವನಿಸಿದ ನಿರುದ್ಯೋಗ ಸಮಸ್ಯೆ: ಪ್ರತಿಪಕ್ಷಗಳಿಂದ ಧರಣಿ

Prasthutha|

ನವದೆಹಲಿ: ಲೋಕ ಸಭೆಯಲ್ಲಿ ಗುರುವಾರ ನಿರುದ್ಯೋಗ ಸಮಸ್ಯೆ, ಬೆಲೆಯೇರಿಕೆ ಹಾಗೂ ತವಾಂಗ್ ಘಟನೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳ ಸದಸ್ಯರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

- Advertisement -

 ಲೋಕಸಭೆಯಲ್ಲಿ ಗದ್ದಲದ ಹೊರತು ಇನ್ನೇನೂ ಕೇಳಲಿಲ್ಲ. ಸಭಾಧ್ಯಕ್ಷರು ಒಂದು ಗಂಟೆ ಕಾಲ ಕಲಾಪ ಮುಂದೂಡಿ ಸೇರಿದರೂ ಪ್ರಶ್ನೆಗಳಿಗೆ ಉತ್ತರ ಕಾಣಲಿಲ್ಲ. ಕೊನೆಗೆ ಪ್ರತಿ ಪಕ್ಷದ ನಾಯಕರು ಘೋಷಣೆ ಕೂಗುತ್ತ ಹೊರಗೆ ಬಂದು, ಸಂಸತ್ ಭವನದ ಮುಂದುಗಡೆ ಪ್ರತಿಭಟನೆ ನಡೆಸಿದರು.

ರಾಜ್ಯ ಸಭೆಯಲ್ಲಿ ದಿಲ್ಲಿ ವಾಯು ಮಾಲಿನ್ಯ ಅಣು ಇಂಧನ ಇತ್ಯಾದಿಗಳ ಬಗ್ಗೆ ಕೂಡ ಪ್ರಶ್ನೆಗಳು ಬಂದವಾದರೂ ಮುಂದೂಡುವಿಕೆ, ಪ್ರತಿಭಟನೆಗಿಂತ ಹೆಚ್ಚಿನದೇನೂ ಮಧ್ಯಾಹ್ನದವರೆಗೆ ನಡೆಯಲಿಲ್ಲ.



Join Whatsapp