ಜೋ ಬೈಡನ್ ಭಾಷಣಗಳನ್ನು ಇತರ ಭಾಷೆಗಳಿಗೆ ಅನುವಾದಿಸಲು ಒತ್ತಾಯ

Prasthutha|

ವಾಷಿಂಗ್ಟನ್: ಅಮೆರಿಕದ ರಾಜಕೀಯದಲ್ಲಿ ಏಷ್ಯನ್–ಅಮೆರಿಕನ್ನರ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜೋ ಬೈಡನ್ ಅವರ ಭಾಷಣಗಳನ್ನು ಹಿಂದಿ ಹಾಗೂ ಏಷ್ಯಾದ ಇತರ ಹಲವು ಭಾಷೆಗಳಿಗೆ ಅನುವಾದಿಸಬೇಕೆಂದು ಅಲ್ಲಿನ ಅಧ್ಯಕ್ಷೀಯ ಆಯೋಗವು ಶ್ವೇತ ಭವನವನ್ನು ಒತ್ತಾಯಿಸಿದೆ.

- Advertisement -

ಪ್ರಸ್ತುತ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಭಾಷಣಗಳು ಇಂಗ್ಲಿಷ್ ನಲ್ಲಿ ಲಭ್ಯ ಇವೆ. ಅವರ ಸಂದೇಶವು 20 ದಶಲಕ್ಷಕ್ಕಿಂತ ಹೆಚ್ಚು ಜನರನ್ನು ತಲುಪುವುದಿಲ್ಲ ಎಂಬ ಕಾರಣದಿಂದ ಏಷ್ಯನ್-ಅಮೆರಿಕನ್ನರು (ಎಎ), ಸ್ಥಳೀಯ ಹವಾಯಿಯನ್ನರು ಮತ್ತು ಪೆಸಿಫಿಕ್ ಐಲ್ಯಾಂಡರ್ಸ್ (ಎನ್ಎಚ್ ಪಿಐ) ಅಧ್ಯಕ್ಷರ ಸಲಹಾ ಆಯೋಗವು ಈ ವಾರದ ತನ್ನ ಸಭೆಯಲ್ಲಿ ಈ  ಶಿಫಾರಸುಗಳನ್ನು ಮಾಡಿತು.

ಈ ಪ್ರಸ್ತಾಪವನ್ನು ಭಾರತೀಯ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ಅವರು ಅಧ್ಯಕ್ಷರ ಸಲಹಾ ಆಯೋಗದ ಮುಂದೆ ಮಂಡಿಸಿದರು.  ಪ್ರಸ್ತಾವವನ್ನು ಸಲ್ಲಿಸಿದ ಮೂರು ತಿಂಗಳೊಳಗಾಗಿ ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎಲ್ಲ ಭಾಷಣಗಳನ್ನು ಸೂಚಿಸಲಾಗಿರುವ ಇತರೆ ಭಾಷೆಗಳಿಗೆ ಅನುವಾದಿಸಬೇಕು. ಹಾಗೂ  ಶ್ವೇತ ಭವನದ ವೆಬ್ ಸೈಟ್ ನಲ್ಲಿ ಈ ಭಾಷಣಗಳು ದೊರೆಯುವಂತೆ ಮಾಡಬೇಕು ಎಂದೂ ಸಭೆಯಲ್ಲಿ ಶಿಫಾರಸು ಮಾಡಲಾಗಿದ್ದು, ಆಯೋಗವು ಈ ಶಿಫಾರಸುಗಳನ್ನು ಅಂಗೀಕರಿಸಿದೆ.



Join Whatsapp