ರೈಲು- ಪ್ಲಾಟ್ ಫಾರಂ ನಡುವೆ ಸಿಲುಕಿದ ತಾಯಿ ಮಗ; ಕೂದಲೆಳೆ ಅಂತರದಲ್ಲಿ ಪಾರು, ವೀಡಿಯೋ ವೈರಲ್

Prasthutha|

ಕಲಬುರಗಿ : ಚಲಿಸುವ ರೈಲು ಮತ್ತು ಪ್ಲಾಟ್ ಫಾರಂ ನಡುವೆ  ಸಿಲುಕಿದ ತಾಯಿ, ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಕಲಬುರಗಿ ರೈಲು ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದಿದೆ.

- Advertisement -

ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ಇದ್ದರೂ ಸಹ ಮೂರನೇ ಪ್ಲಾಟ್ ಫಾರಂನಿಂದ ಒಂದನೇ ಪ್ಲಾಟ್ ಫಾರಂಗೆ ತಾಯಿ ಮಗ ಹಳಿ ದಾಟಿಕೊಂಡು ಬರುವಾಗ ಗೂಡ್ಸ್ ರೈಲು ಆಗಮಿಸಿದೆ. ಮುಂದೆ ಹೋಗಿದ್ದ ತಾಯಿ ರೈಲಿಗೆ ಸಿಲುಕಿದ್ದಾಳೆಂದು ಮಗ ರಕ್ಷಣೆಗೆ ಧಾವಿಸಿ ಬಂದಿದ್ದು, ಬಳಿಕ ಇಬ್ಬರೂ ಹಳಿಯ ಪಕ್ಕದ ಇಕ್ಕಟ್ಟಾದ ಸ್ಥಳದಲ್ಲಿಯೇ ರೈಲು ದಾಟುವವರೆಗೆ ಮುದುಡಿ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ. ರೈಲು ಹೋದ ಬಳಿಕ ಇತರ ಪ್ರಯಾಣಿಕರು ಅವರನ್ನು ಮೇಲೆಳೆದಿದ್ದಾರೆ.

ಸ್ಥಳೀಯರು ಇದನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಆ ಇಬ್ಬರು ಪ್ರಯಾಣಿಕರ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ರೈಲು ಹಳಿ ದಾಟದಂತೆ ನಿತ್ಯ ಹೇಳಿದರೂ ಪ್ರಯಾಣಿಕರು ಸ್ಪಂದಿಸುತ್ತಿಲ್ಲ. ಸುರಕ್ಷತೆಯ ಹಿತದೃಷ್ಟಿಯಿಂದ ಪ್ರಯಾಣಿಕರು ಮೇಲ್ಸೇತುವೆ ಬಳಸಬೇಕು ಎಂದು ಕಲಬುರಗಿ ರೈಲು ನಿಲ್ದಾಣದ ವ್ಯವಸ್ಥಾಪಕ ಸತ್ಯನಾರಾಯಣ ದೇಸಾಯಿ ಹೇಳಿದ್ದಾರೆ.



Join Whatsapp